ಶಿರಸಿ: ನಗರದ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ಪ್ರತಿವರ್ಷದಂತೆ ಫೆಬ್ರವರಿ 1ರಿಂದ ಫೆಬ್ರುವರಿ 3ರವರೆಗೆ ಫಲಪುಷ್ಪ ಪ್ರದರ್ಶನ ಮತ್ತು ಸಾವಯವ ಸಿರಿಧಾನ್ಯ ಮೇಳವನ್ನು ಅತ್ಯಂತ ವಿನೂತನವಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಿ.ಪಿ ಸತೀಶ ಅವರ ನೇತೃತ್ವದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.
ಈ ಫಲಪುಷ್ಪ ಮತ್ತು ಸಿರಿಧಾನ್ಯ ಮೇಳದಲ್ಲಿ ವಿವಿಧ ಪುಷ್ಪಗಳಿಂದ ತಯಾರಿಸಿದ ಕಲಾಕೃತಿಗಳು ಸೇರಿದಂತೆ ವಿಶೇಷವಾಗಿ ನಮ್ಮ ರಾಜ್ಯಕ್ಕೆ ಮತ್ತು ದೇಶಕ್ಕೆ ದಿಟ್ಟವಾಗಿ ಹೋರಾಡಿ ವಿಶ್ವಮಟ್ಟದಲ್ಲಿ ಗಮನ ಸೆಳೆದ ವೀರ ಮಹಿಳೆಯರ ಸವಿನೆನಪಿಗಾಗಿ ಆಪರೇಷನ್ ಸಿಂಧೂರ್ ಬಿಂಬಿಸುವ ರಫೆಲ್ ಯುದ್ಧ ವಿಮಾನ ,ಸುದರ್ಶನ ಚಕ್ರ, ಬ್ರಹ್ಮೋಸ್ ಮಿಸೈಲ್, 2025 ವಿಶ್ವಕಪ್ ಗೆದ್ದ ಮಹಿಳೆಯರ ಕಲಾಕೃತಿಗಳು ಅನಾವರಣಗೊಳ್ಳಲಿವೆ.ಅಲ್ಲದೇ ಸಿರಿಧಾನ್ಯಗಳ ಪ್ರದರ್ಶನ ಹಾಗೂ ಮಳಿಗೆಗಳು ಮತ್ತು ಸಾವಯವ ಸಿರಿಧಾನ್ಯ ಕಲಾಕೃತಿ.
ಸಿರಿಧಾನ್ಯ ರಾಶಿ ರಂಗೋಲಿ, ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿ ರಂಗೋಲಿ, ಕಾಳುಮೆಣಸಿನ ಸ್ಥಳೀಯ ತಳಿಗಳ ಪ್ರದರ್ಶನ, ಪದ್ಮಶ್ರೀ ಪುರಸ್ಕೃತ ದಿ. ಸಾಲುಮರದ ತಿಮ್ಮಕ್ಕ ರಂಗೋಲಿ, ನಮ್ಮ ಸಸಿ ನಿಮ್ಮ ಮನೆಯಂಗಳದಲ್ಲಿ ಎಂಬ ಪರಿಕಲ್ಪನೆಯಡಿ ಸಸ್ಯ ಸಾಮಗ್ರಿಗಳಮಾರಾಟ ಜರುಗಲಿದೆ.ಮತ್ತು ತೋಟಗಾರಿಕಾ ಬೆಳೆಗಳ ಮೌಲ್ಯವರ್ಧಿತ ಉತ್ಪನ್ನಗಳ ಮಳಿಗೆಗಳು, ವಿವಿಧ ವಿನ್ಯಾಸದಲ್ಲಿ ರಚಿಸಿದ ಹೂಕುಂಡಗಳ ಜೋಡಣೆ.ಹಾಗೂ ಸೆಲ್ಫಿ ಫೋಟೋ ಪಾಯಿಂಟ್‌ಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸಿದ ಸಾರ್ವಜನಿಕರು, ವಿದ್ಯಾರ್ಥಿಗಳು ,ರೈತರು ಮತ್ತು ಚಿಕ್ಕಮಕ್ಕಳು ಕಣ್ತುಂಬಿಕೊಳ್ಳುವ ರೀತಿಯಲ್ಲಿ ಸಕಲ ಸಿದ್ಧತೆಗಳನ್ನು ಇಲಾಖೆವತಿಯಿಂದ ಮಾಡಿಕೊಳ್ಳಲಾಗಿದೆ.
Kshetra Samachara
31/01/2026 11:49 am