ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಸಂಸ್ಕೃತಿಗೆ ವಿರುದ್ಧವಾಗಿ ಬದುಕಿದರೆ ಧರ್ಮ ಸಂರಕ್ಷಣೆ ಸಾಧ್ಯವಿಲ್ಲ- ದಾಮೋದರ ನೆತ್ತರಕೆರೆ

ಮುಲ್ಕಿ: ಸಂಸ್ಕ್ರತಿಗೆ ವಿರುದ್ದವಾಗಿ ಬದುಕಿದರೆ ನಮ್ಮ ಧರ್ಮ ರಕ್ಷಣೆ ಸಾದ್ಯವಿಲ್ಲ, ಮಕ್ಕಳು ನಾವು ಮಾಡಿದ ಸಂಸ್ಕ್ರತಿ ವಿರೋಧಿಯನ್ನೇ ಕಲಿತು ಇದುವೇ ಸಂಪ್ರದಾಯ ಎಂದು ತಿಳಿಯುತ್ತಾರೆ. ನಮ್ಮ ಧರ್ಮ ಸಂಸ್ಕ್ರತಿಗೆ ಸರಿಯಾಗಿ ನಮ್ಮ‌ಮನೆಯ ಹಬ್ಬಗಳನ್ನು ಆಚರಿಸುವ, ಈ ಮೂಲಕ ಭವ್ಯ ರಾಷ್ಟ್ರವನ್ನು ಕಟ್ಟಬೇಕಾಗಿದೆ ಎಂದು ಮಂಗಳೂರು ವಿಭಾಗ ಬಾಲಗೋಕುಲ ಟೋಳಿಯ ಸದಸ್ಯ ದಾಮೋದರ ನೆತ್ತರಕೆರೆ ಹೇಳಿದರು.

ಅವರು ಹಿಂದೂಸಂಗಮ‌ಅಯೋಜನಾ ಸಮಿತಿ ಕಿನ್ನಿಗೋಳಿ ಮಂಡಲದ ವತಿಯಿಂದ ಹೊಸಕಾವೇರಿ ಅಶ್ವಥಕಟ್ಟೆಯ ಬಳಿ ನಡೆದ ಹಿಂದೂ ಸಂಗಮದಲ್ಲಿ ದಿಕ್ಸೂಚಿ ಬಾಷಣಗೈದರು. ಕ.ಸಾ.ಪ ಮಾಜೀ ರಾಜ್ಯಾಧ್ಯಕ್ಷ ಹರಿಕೃಷ್ಣಪುನರೂರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಪೂರ್ವಭಾವಿಯಾಗಿ ಪುನರೂರು ದೇವಳದ ಬಳಿಯಿಂದ ಮತ್ತು ಕಿನ್ನಿಗೋಳಿ ಬಟ್ಟಕೋಡಿಯಿಂದ ಹಿಂದೂ ಸಂಗಮ‌ನಡೆಯುವಲ್ಲಿಗೆ ನೂರಾರು ಮಂದಿ ಮೆರವಣಿಗೆ ನಡೆಸಿದರು.

ಈ ಸಂದರ್ಭ ಕಟೀಲು ವಿದ್ಯಾ ಸಂಸ್ಥೆಯ ಉಪಾನ್ಯಾಸಕಿ ಡಾ.ವನಿತಾ ಶೆಟ್ಟಿ ಪದ್ಮನ್ನೂರು, ಪುನರೂರು ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ವಾಸುದೇವ ರಾವ್, ಜಿ.ಎಸ್.ಬಿ ಮಾತೃ ಸಮಿತಿಯ ಕಾರ್ಯದರ್ಶಿ ರಂಜನಿ ರಾವ್, ಗೋಳಿಜೋರ ಕೊರ್ದಬ್ಬು ದೈವಸ್ಥಾನದ ಅಧ್ಯಕ್ಷ ಶ್ರೀ ನರ್ಸಪ್ಪ, ಮೂಕಾಂಬಿಕ ದೇವಸ್ಥಾನ ಗುತ್ತಕಾಡು ಇಲ್ಲಿನ ಧರ್ಮದರ್ಶಿ ವಿವೇಕಾನಂದ, ವೀರಭದ್ರಮಹಾಮ್ಮಾಯಿ ದೇವಸ್ಥಾನ ಮಾನಂಪಾಡಿ ಇಲ್ಲಿನ ಆಡಳಿತ ಮೊಕ್ತೇಸರ, ಪುರಂದರ ಡಿ ಶೆಟ್ಟಿಗಾರ್, ಎಳತ್ತೂರು ಮಹಮ್ಮಾಯಿ ದೇವಸ್ಥಾನದ ಅಧ್ಯಕ್ಷ ಸುರೇಶ್ ಶೆಟ್ಡಿ ನಡಿಯಾಲ್ ಗುತ್ತು,ಪುನರೂರು ಶ್ರೀ ಬ್ರಹ್ಮಮುಗೇರ ದೈವಸ್ಥಾನದ ಅರ್ಚಕ ರಘುರಾಮ‌ ಪುನರೂರು, ಹಿಂದೂ ಸಂಗಮ‌ಆಯೋಜನಾ ಸಮಿತಿಯ ಉಪಾಧ್ಯಕ್ಷ ಶಂಕರ ಮಾಸ್ಟರ್ ಗೋಳಿಜೋರ, ಲಕ್ಷೀವೆಂಕಟರಮಣ ದೇವಸ್ಥಾನ ತಾಳಿಪಾಡಿ ಇಲ್ಲಿನ ಅಧ್ಯಕ್ಷ ದಯಾನಂದ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂ ಸಂಗಮ ಸಮಿತಿ ಮಂಡಲ‌ ಸದಸ್ಯ ದೇವಪ್ರಸಾದ್ ಪುನರೂರು ಸ್ವಾಗತಿಸಿ ಶಂಕರ ಮಾಸ್ಟರ್ ಗೋಳಿಜೋರ ಧನ್ಯವಾದ ಸಮರ್ಪಿಸಿದರು ಸಂತೋಷ್ ಶೆಟ್ಟಿ‌ ಪುನರೂರು ನಿರೂಪಿಸಿದರು. ಮುಲ್ಕಿ ತಾಲೂಕು ಹಿಂದೂ ಸಂಗಮ‌ ಅಯೋಜನಾ ಸಮಿತಿ ಉಪಾಧ್ಯಕ್ಷ ಪ್ರಥ್ವಿರಾಜ್ ಆಚಾರ್ಯ ಪ್ರಸ್ತಾವನೆಗೈದರು.

Edited By : PublicNext Desk
Kshetra Samachara

Kshetra Samachara

02/02/2026 09:48 pm

Cinque Terre

1.41 K

Cinque Terre

0

ಸಂಬಂಧಿತ ಸುದ್ದಿ