ಮುಲ್ಕಿ: ಸ್ವಚ್ಛ ಭಾರತ್ ಯೋಜನೆಯಡಿ ಶೇ 100 ರಷ್ಟು ಅನುದಾನವನ್ನು ಯಶಸ್ವಿಯಾಗಿ ನಡೆಸಿ ಸರಕಾರದಿಂದ ಪ್ರಶಂಸನಾ ಪತ್ರ ಪಡೆದ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಮಧುಕರ್ ರವರನ್ನು ಮುಲ್ಕಿ ನಗರ ಪಂಚಾಯತ್ ಕಚೇರಿಯಲ್ಲಿ ಹೊಸ ಅಂಗಣ ಸಂಸ್ಥೆ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹೊಸ ಅಂಗಣ ಸಂಸ್ಥೆ ಮುಖ್ಯಸ್ಥ ಡಾ ಹರಿಶ್ಚಂದ್ರ ಪಿ ಸಾಲ್ಯಾನ್ ಮಾತನಾಡಿ ನಗರದ ಸ್ವಚ್ಛತೆಯಲ್ಲಿ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದ ಶ್ರಮ ಬಹಳಷ್ಟಿದ್ದು ನಾಗರಿಕರು ಕೂಡ ಸಹಕಾರ ನೀಡಿದರೆ ಮತ್ತಷ್ಟು ಅಭಿವೃದ್ಧಿ ಸಾಧ್ಯ ಎಂದರು.
ಈ ಸಂದರ್ಭ ಮಾತೃಶ್ರೀ ರುಕ್ಮಿಣಿ, ಹೊಸ ಅಂಗಣ ಸಂಸ್ಥೆಯ ಪದಾಧಿಕಾರಿಗಳಾದ ವಾಸು ಪೂಜಾರಿ ಚಿತ್ರಾಪು, ದಿನೇಶ್ ಶೆಟ್ಟಿ, ರವಿ ಅಂಚನ್ ನಡಿಕುದ್ರು, ಜಾನ್ ಕ್ವಾಡ್ರಾಸ್, ಸಾಮಾಜಿಕ ಕಾರ್ಯಕರ್ತ ಮಂಜುನಾಥ ಆರ್ ಕೆ, ಮಾಜೀ ನಗರ ಪಂಚಾಯತ್ ಸದಸ್ಯ ಕುಳಾಯಿ ಬಷೀರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
03/02/2026 11:57 am
LOADING...