ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ :ಮಡಿವಾಳ ಮಾಚಿದೇವರು ಸಾಮಾಜಿಕ ಕ್ರಾಂತಿಯ ಹರಿಕಾರ - ಸದಾಶಿವ ಹೊಸದುರ್ಗ

ಮುಲ್ಕಿ: ತಾಲೂಕು ಆಡಳಿತದ ವತಿಯಿಂದ ಮಡಿವಾಳ ಮಾಚಿದೇವ ಜಯಂತಿಯನ್ನು ಕಾರ್ನಾಡ್ ಮುಲ್ಕಿ ತಹಶಿಲ್ದಾರ್ ಕಚೇರಿಯಲ್ಲಿ ಆಚರಿಸಲಾಯಿತು.

ರಜಕ ಯಾನೆ ಮಡಿವಾಳ ಸಮಾಜ ಸೇವಾ ಸಂಘ ಮುಲ್ಕಿ ವಲಯದ ಅಧ್ಯಕ್ಷ ಸದಾಶಿವ ಹೊಸದುರ್ಗ ರವರು ಮಡಿವಾಳ ಮಾಚಿದೇವ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ದುರ್ಬಲರ ಶೋಷಣೆ, ಅಸ್ಪೃಶ್ಯತೆ ಶಿಕ್ಷಣದಲ್ಲಿ ಅಸಮಾನತೆಯನ್ನು ಮೆಟ್ಟಿನಿಂತ ಮಡಿವಾಳ ಮಾಚಿದೇವ ರವರು ಸಾಮಾಜಿಕ ಕ್ರಾಂತಿಯ ಹರಿಕಾರ ಎಂದು ಬಣ್ಣಿಸಿದರು.

ಮುಲ್ಕಿ ತಾಲೂಕು ಉಪ ತಹಶಿಲ್ದಾರ್ ದಿಲೀಪ್ ರೋಡ್ಕರ್ ಮಾತನಾಡಿ ಮಡಿವಾಳ ಮಾಚಿದೇವರು ನೇರ ನಡೆ-ನುಡಿಯ ವ್ಯಕ್ತಿಯಾಗಿ, ಅವತಾರ ಪುರುಷನಾಗಿ ಗಣಾಚಾರ ಸಂಪನ್ನರಾಗಿ ವೀರ ಶರಣರಾಗಿದ್ದರು. ಅವರ ಆದರ್ಶಗಳನ್ನು ಯುವ ಜನಾಂಗ ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.

ಈ ಸಂದರ್ಭ ತಾಲೂಕು ಕಂದಾಯ ಅಧಿಕಾರಿ ಮೋಹನ್, ತಾಲೂಕು ರಜ ಕಲ್ಯಾಣಿ ಮಡಿವಾಳ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ದಿವಾಕರ ಸಾಲ್ಯಾನ್ ಕಾರ್ಯದರ್ಶಿ ನಂದಿನಿ ರವಿ ಸದಸ್ಯರಾದ ಯತಿರಾಜ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು

Edited By : PublicNext Desk
Kshetra Samachara

Kshetra Samachara

01/02/2026 11:41 am

Cinque Terre

1.78 K

Cinque Terre

0

ಸಂಬಂಧಿತ ಸುದ್ದಿ