ಮುಲ್ಕಿ: ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ-2026’ರ ಸಮಾರೋಪ ಕಾರ್ಯಕ್ರಮ ಜನವರಿ 31ರಂದು ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ ರಾಧಾಕೃಷ್ಣ ಚಟುವಟಿಕೆ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿವಕುಮಾರ್ ಮುಗ್ಗಳ್ಳಿ ಮಾತನಾಡಿ ಮಕ್ಕಳಲ್ಲಿ ರಸ್ತೆ ಸುರಕ್ಷಾ ಸಂಕೇತ, ಅಪಘಾತಗಳ ಕಾರಣ, ರಸ್ತೆ ನಿಯಮಗಳ ಪಾಲನೆ ಯ ಮಹತ್ವದ ಬಗ್ಗೆ ತಿಳಿಸಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ ನರಸಿಂಹ ಪೈ ಮಾತನಾಡಿ ರಸ್ತೆ ಸುರಕ್ಷತಾ ನಿಯಮ ಪಾಲಿಸಿ ಜೀವ ಉಳಿಸಿ ಎಂದರು
ಶಾಲಾ ಸಂಚಾಲಕ ಎಂ. ಪಾಂಡುರಂಗ ಭಟ್ ರಸ್ತೆ ಸುರಕ್ಷತೆ ನಮ್ಮೆಲ್ಲರ ಹೊಣೆ ಎಂದರು. ಶಾಲಾ ಮುಖ್ಯೋಪಾಧ್ಯಾಯಿನಿ ಕಾಮಾಕ್ಷಿ ಆರ್. ನಾಯಕ್ ಸ್ವಾಗತಿಸಿ, ರಸ್ತೆ ಸುರಕ್ಷತಾ ಮಾಸಾಚರಣೆಯ ಪ್ರಯುಕ್ತ ಕೈಗೊಂಡ ವಿವಿಧ ಚಟುವಟಿಕೆಗಳ ವಿವರ ತಿಳಿಸಿದರು.
ಶಿಕ್ಷಕರಾದ ನಮಿತಾ ವಂದಿಸಿದರು. ಶ್ರೀಲಕ್ಷ್ಮಿ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
Kshetra Samachara
31/01/2026 06:54 pm
LOADING...