ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಷೇರುಪೇಟೆಗೆ ಬಂಪರ್ ಬೂಸ್ಟ್: ನಿಫ್ಟಿ, ಸೆನ್ಸೆಕ್ಸ್ ದಾಖಲೆ ಜಿಗಿತ!

ಮುಂಬೈ : ಮಂಗಳವಾರ ದೇಶೀಯ ಷೇರು ಮಾರುಕಟ್ಟೆಯಲ್ಲಿ ಗೂಳಿ ಅಬ್ಬರಿಸಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ತೀವ್ರ ಗತಿಯಲ್ಲಿ ಮುನ್ನುಗ್ಗಿದವು.

ಈ ಮಹತ್ವದ ಬೆಳವಣಿಗೆಗೆ ಪ್ರಮುಖ ಕಾರಣವೆಂದರೆ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಯಶಸ್ವಿಯಾಗಿದ್ದು, ಭಾರತದಿಂದ ಆಮದಾಗುವ ಸರಕುಗಳ ಮೇಲಿನ ಸುಂಕವನ್ನು ಅಮೆರಿಕಾ 18%ಕ್ಕೆ ಇಳಿಕೆ ಮಾಡಿರುವುದು ಹೂಡಿಕೆದಾರರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಮಾರುಕಟ್ಟೆಯು ಪ್ರೀ-ಓಪನ್‌ನಲ್ಲಿ ಗಣನೀಯ ಅಂತರದಲ್ಲಿ ತೆರೆದುಕೊಂಡಿತು. ಬೆಳಿಗ್ಗೆ 9:08ಕ್ಕೆ, ಸೆನ್ಸೆಕ್ಸ್ 3,648 ಪಾಯಿಂಟ್‌ಗಳಷ್ಟು, ಅಂದರೆ ಶೇ. 4.47ರಷ್ಟು ಏರಿಕೆಗೊಂಡು 85,314 ಮಾರ್ಕ್‌ನಲ್ಲಿ ವಹಿವಾಟು ಆರಂಭಿಸಿತು.

ಇದೇ ಅವಧಿಯಲ್ಲಿ, ನಿಫ್ಟಿ50 ಸೂಚ್ಯಂಕವು 1,220 ಪಾಯಿಂಟ್‌ಗಳಷ್ಟು, ಅಂದರೆ ಶೇ. 4.86ರಷ್ಟು ಜಿಗಿದು 26,038 ಮಾರ್ಕ್‌ನಲ್ಲಿ ಓಪನ್ ಆಯಿತು.

ಬಹುತೇಕ ಎಲ್ಲಾ ವಲಯಗಳು ಹಸಿರು ಬಣ್ಣದಲ್ಲಿ ಮುನ್ನಡೆ ಸಾಧಿಸಿದವು. ಜಾಗತಿಕ ಷೇರುಪೇಟೆಯಲ್ಲೂ ಸಕಾರಾತ್ಮಕ ವಹಿವಾಟು ಕಂಡುಬಂದಿದ್ದು, ಇದು ದೇಶೀಯ ಮಾರುಕಟ್ಟೆಗೆ ಮತ್ತಷ್ಟು ಬಲ ತುಂಬಿತು.

ಆರಂಭಿಕ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್‌ನಂತಹ ದೈತ್ಯ ಷೇರುಗಳ ಏರಿಕೆಯು ಬೆಂಚ್‌ಮಾರ್ಕ್ ರ್ಯಾಲಿಗೆ ಗಣನೀಯ ಕೊಡುಗೆ ನೀಡಿತು.

Edited By : Abhishek Kamoji
PublicNext

PublicNext

03/02/2026 04:00 pm

Cinque Terre

26.13 K

Cinque Terre

0

ಸಂಬಂಧಿತ ಸುದ್ದಿ