ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : ಜಗತ್ತನ್ನೇ ಬೆಚ್ಚಿಬೀಳಿಸಿದ ಎಪ್ಸ್ಟೀನ್ ವಿಕೃತಿ - ಫೈಲ್‌ಗಳಿಂದ ಬಯಲಾದ ಭಯಾನಕ ಸತ್ಯಗಳು!

ವಾಷಿಂಗ್ಟನ್, ಡಿ.ಸಿ : ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಜನವರಿ 30, 2026 ಬೃಹತ್ ಪ್ರಮಾಣದ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಎಪ್ಸ್ಟೀನ್ ಅಡುಗೆಮನೆಯಲ್ಲಿ ಯುವತಿಯರನ್ನು ಅಟ್ಟಾಡಿಸಿಕೊಂಡು ಓಡುತ್ತಿರುವ ದೃಶ್ಯವಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಅಮೆರಿಕದ ನ್ಯಾಯಾಂಗ ಇಲಾಖೆಯು (DOJ) 'ಎಪ್ಸ್ಟೀನ್ ಫೈಲ್ಸ್ ಟ್ರಾನ್ಸ್ಪರೆನ್ಸಿ ಆಕ್ಟ್' ಅಡಿಯಲ್ಲಿ ಬೃಹತ್ ಪ್ರಮಾಣದ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಸುಮಾರು 30 ಲಕ್ಷಕ್ಕೂ ಹೆಚ್ಚು ಪುಟಗಳು, 2,000 ಕ್ಕೂ ಹೆಚ್ಚು ವಿಡಿಯೋಗಳು ಮತ್ತು 1.8 ಲಕ್ಷ ಚಿತ್ರಗಳನ್ನು ಒಳಗೊಂಡಿರುವ ಈ ಬಿಡುಗಡೆಯಲ್ಲಿ, ಇತ್ತೀಚೆಗೆ ಹೊರಬಿದ್ದ ಒಂದು ವಿಡಿಯೋದಲ್ಲಿ ಜೆಫ್ರಿ ಎಪ್ಸ್ಟೀನ್ ಅಡುಗೆಮನೆಯಲ್ಲಿ ಯುವತಿಯರನ್ನು "ತಮಾಷೆಯಾಗಿ" ಬೆನ್ನಟ್ಟುವ ಹಾಗೂ ಮತ್ತೊಬ್ಬ ಮಹಿಳೆಯೊಂದಿಗೆ ನೃತ್ಯ ಮಾಡುವ ದೃಶ್ಯಗಳು ಸೆರೆಯಾಗಿವೆ.

ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ನೆಟ್ಟಿಗರು ಈ ದೃಶ್ಯಗಳನ್ನು "ಕೇವಲ ತಮಾಷೆಯಲ್ಲ, ಇದೊಂದು ವಿಕೃತ ಮತ್ತು ಕ್ರೂರ ವರ್ತನೆ" ಎಂದು ಖಂಡಿಸಿದ್ದಾರೆ. ಇದಲ್ಲದೆ, ಈ ಲೈಂಗಿಕ ಹಗರಣದಲ್ಲಿ ಭಾಗಿಯಾದ ಎಲ್ಲಾ ಗಣ್ಯ ವ್ಯಕ್ತಿಗಳ ಪಟ್ಟಿಯನ್ನು ಸಂಪೂರ್ಣವಾಗಿ ಬಹಿರಂಗಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಖಾಸಗಿತನಕ್ಕೆ ಧಕ್ಕೆ ಮತ್ತು ಪ್ರಮುಖರ ಹೆಸರುಗಳು

ಈ ಫೈಲ್‌ಗಳ ಬಿಡುಗಡೆಯ ಮುಖ್ಯ ಉದ್ದೇಶ ಪಾರದರ್ಶಕತೆಯನ್ನು ಕಾಪಾಡುವುದಾಗಿದ್ದರೂ, ಕೆಲವು ದಾಖಲೆಗಳಲ್ಲಿ ಸಂತ್ರಸ್ತರ ಹೆಸರುಗಳನ್ನು ಸರಿಯಾಗಿ ಅಳಿಸದೇ ಬಿಟ್ಟಿರುವ ಕಾರಣ ಅವರ ಖಾಸಗಿತನಕ್ಕೆ ಧಕ್ಕೆ ಉಂಟಾಗಿದೆ ಎಂಬ ದೂರುಗಳು ಕೇಳಿಬಂದಿವೆ.

ಬಿಡುಗಡೆಯಾಗಿರುವ ಇತ್ತೀಚಿನ ಫೈಲ್‌ಗಳಲ್ಲಿ ಬಿಲ್ ಗೇಟ್ಸ್, ಎಲಾನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್ ಅವರಂತಹ ಪ್ರಭಾವಿ ವ್ಯಕ್ತಿಗಳ ಹೆಸರುಗಳು ಉಲ್ಲೇಖಗೊಂಡಿವೆ. ಆದರೆ, ಡೊನಾಲ್ಡ್ ಟ್ರಂಪ್ ವಿರುದ್ಧದ ಕೆಲವು ಆರೋಪಗಳು ಸುಳ್ಳು ಮತ್ತು ಆಧಾರರಹಿತ ಎಂದು ನ್ಯಾಯಾಂಗ ಇಲಾಖೆ ಸ್ಪಷ್ಟಪಡಿಸಿದೆ.

2019ರಲ್ಲಿ ಜೆಫ್ರಿ ಎಪ್ಸ್ಟೀನ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೂ, ಆತನ ಲೈಂಗಿಕ ಹಗರಣದ ಜಾಲ ಮತ್ತು ಅದಕ್ಕೆ ಸಂಬಂಧಿಸಿದ ಬೆಳವಣಿಗೆಗಳು ಇಂದಿಗೂ ವಿಶ್ವದಾದ್ಯಂತ ದೊಡ್ಡ ಮಟ್ಟದ ಸಂಚಲನ ಮೂಡಿಸುತ್ತಲೇ ಇವೆ.

Edited By : Abhishek Kamoji
PublicNext

PublicNext

03/02/2026 04:02 pm

Cinque Terre

20.1 K

Cinque Terre

0

ಸಂಬಂಧಿತ ಸುದ್ದಿ