ಶಿವಮೊಗ್ಗ: ಭದ್ರಾವತಿ ತಾಲೂಕಿನಲ್ಲಿ ಕರಡಿ ಹಾವಳಿ ಮುಂದುವರೆದಿದ್ದು, ಒಂದರ ಬೆನ್ನಲ್ಲೇ ಮತ್ತೊಂದು ದಾಳಿ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಇತ್ತೀಚೆಗೆ ಉಕ್ಕುಂದದಲ್ಲಿ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ, ಕೂಡ್ಲಿಗೆರೆ ಗ್ರಾಮದಲ್ಲಿ 30 ವರ್ಷದ ಕೃಷಿ ಕಾರ್ಮಿಕ ರಾಜು ಮೇಲೆ ಕರಡಿ ದಾಳಿ ಮಾಡಿದೆ. ತಮ್ಮ ತೋಟಕ್ಕೆ ಹೋಗಿದ್ದ ರಾಜು ಅವರ ಮೇಲೆ ಏಕಾಏಕಿ ಎರಗಿದ ಕರಡಿ, ಕೈಯಲ್ಲಿ ಕುಡಗೋಲು ಇದ್ದರೂ ಅಚ್ಚರಿಯ ರೀತಿಯಲ್ಲಿ ದಾಳಿ ನಡೆಸಿದೆ. ದಾಳಿಯಿಂದ ರಾಜು ಅವರ ಕೈಗಳು ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
PublicNext
04/02/2026 10:01 am
LOADING...