ಬೆಂಗಳೂರು: ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡುವ ವೇಳೆ ಅಡ್ಡಿಪಡಿಸುತ್ತಿದ್ದ ಬಿಜೆಪಿ ಶಾಸಕ ಶರಣು ಸಲಗಾರ್ ಅವರನ್ನು ಸಭಾಧ್ಯಕ್ಷ ಯು.ಟಿ. ಖಾದರ್ ಎದ್ದು ನಿಲ್ಲಿಸಿ, 'ವಿಬಿಜಿ ರಾಮ್ ಜಿ' ಯೋಜನೆಯ ಪೂರ್ಣ ರೂಪವನ್ನು ಹೆಡ್‌ಮಾಸ್ಟರ್ ಶೈಲಿಯಲ್ಲಿ ಕೇಳಿದ ಅನಿರೀಕ್ಷಿತ ಘಟನೆ ವಿಧಾನಸಭೆಯಲ್ಲಿ ನಡೆಯಿತು.
ಸಭಾಧ್ಯಕ್ಷರ ಈ ವರ್ತನೆಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಶಾಸಕರನ್ನು ಈ ರೀತಿ ಗುರಿಯಾಗಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.
ತಬ್ಬಿಬ್ಬಾದರೂ, ಶಾಸಕ ಸಲಗಾರ್ ಯೋಜನೆಯ ಪೂರ್ಣ ರೂಪವನ್ನು ವಿವರಿಸಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಪ್ರತಿದಾಳಿ ನಡೆಸಿದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್, ಸಭಾಧ್ಯಕ್ಷರಿಗೆ ಸವಾಲು ಹಾಕಿ, ಶಿವಲಿಂಗೇಗೌಡರನ್ನು ಎಬ್ಬಿಸಿ ನರೇಗಾ (NREGA) ಅರ್ಥ ಕೇಳುವಂತೆ ಆಗ್ರಹಿಸಿದರು.
PublicNext
04/02/2026 11:27 am
LOADING...