ವಾಷಿಂಗ್ಟನ್ DC : ಭಾರತದೊಂದಿಗಿನ ಹೊಸ ವ್ಯಾಪಾರ ಒಪ್ಪಂದವನ್ನು ಅಮೆರಿಕ ಶಕ್ತಿಕೇಂದ್ರ ಶ್ವೇತಭವನ ಶ್ಲಾಘಿಸಿದ್ದು, ಭಾರತ ದೇಶವು ಇನ್ನು ಮುಂದೆ ರಷ್ಯಾದಿಂದ ತೈಲವನ್ನು ಖರೀದಿಸದಿರಲು ಬದ್ಧವಾಗಿದೆ ಎಂದು ಹೇಳಿದೆ, ಪ್ರಧಾನಿ ಮೋದಿ ಕೂಡ ಅಮೆರಿಕದ ಪ್ರಮುಖ ವಲಯಗಳಲ್ಲಿ 500 ಶತಕೋಟಿ ಡಾಲರ್ ಮೌಲ್ಯದ ಹೂಡಿಕೆಗಳಿಗೆ ಒಪ್ಪಿಕೊಂಡಿದ್ದಾರೆ ಎಂದು ಹೇಳಿದೆ.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಈ ಹೇಳಿಕೆ ನೀಡಿದ್ದು, ಅಧ್ಯಕ್ಷರು ಭಾರತದೊಂದಿಗೆ ಮತ್ತೊಂದು ಉತ್ತಮ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡರು. ಅವರು ಪ್ರಧಾನಿ ಮೋದಿ ಅವರೊಂದಿಗೆ ನೇರವಾಗಿ ಮಾತುಕತೆ ನಡೆಸಿದ್ದು, ಉತ್ತಮ ಸಂಬಂಧವನ್ನು ಹಂಚಿಕೊಳ್ಳುತ್ತಿದ್ದಾರೆ ಎಂದರು.
ಭಾರತವು ಇನ್ನು ಮುಂದೆ ರಷ್ಯಾದ ತೈಲವನ್ನು ಖರೀದಿಸದಿರಲು ಮಾತ್ರವಲ್ಲದೆ, ಅಮೆರಿಕದಿಂದ ಮತ್ತು ಸಂಭಾವ್ಯವಾಗಿ ವೆನೆಜುವೆಲಾದಿಂದಲೂ ತೈಲವನ್ನು ಖರೀದಿಸಲು ಬದ್ಧವಾಗಿದೆ. ಇದರಿಂದ ಅಮೆರಿಕಾದ ಜನರಿಗೆ ನೇರ ಪ್ರಯೋಜನ ಸಿಗುತ್ತದೆ ಎಂದರು.
PublicNext
04/02/2026 06:29 pm
LOADING...