ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಸದನದಲ್ಲಿ ಕೋತಿ ಆಟ ಬೇಡ: ಬಿಜೆಪಿ ನಡೆಗೆ ಶಿವಲಿಂಗೇಗೌಡರ ತೀವ್ರ ಆಕ್ರೋಶ!

ಬೆಂಗಳೂರು : ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ನಡವಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿರಿಯ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ, "ಸದನದಲ್ಲಿ ಕೋತಿ ಆಟ ಬೇಡ" ಎಂದು ಏರುಧ್ವನಿಯಲ್ಲಿ ಕಿಡಿಕಾರಿದರು.

ಬುಧವಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದ ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ಧದ ನಿರ್ಣಯ ಕುರಿತ ಚರ್ಚೆಯಲ್ಲಿ ಶಿವಲಿಂಗೇಗೌಡ ಮಾತನಾಡುತ್ತಿದ್ದಾಗ, ಧರಣಿ ನಿರತ ಬಿಜೆಪಿ ಸದಸ್ಯರು ಅಡ್ಡಿಪಡಿಸಿದರು. ಇದಕ್ಕೆ ತೀವ್ರ ಅಸಮಾಧಾನಗೊಂಡ ಶಿವಲಿಂಗೇಗೌಡ, "ರಾಜ್ಯದ ಜನರಿಗೆ ಅನ್ಯಾಯವಾಗುತ್ತಿದೆ.

ಆದರೆ ವಿರೋಧ ಪಕ್ಷದ ಸದಸ್ಯರು ಅದನ್ನು ಹಾಸ್ಯ ಮಾಡಿಕೊಂಡು, ನೃತ್ಯ ಮಾಡುತ್ತಾ ಧರಣಿ ನಡೆಸುತ್ತಿದ್ದಾರೆ. ಅವರಿಗೆ ಗಂಭೀರತೆ ಇಲ್ಲ" ಎಂದು ಟೀಕಿಸಿದರು.

Edited By : Abhishek Kamoji
PublicNext

PublicNext

04/02/2026 10:16 pm

Cinque Terre

5.24 K

Cinque Terre

0

ಸಂಬಂಧಿತ ಸುದ್ದಿ