ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ತಿಪ್ಪಮ್ಮನವರಿಗೆ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ

ಬಾಗಲಕೋಟೆ: ತಾಲೂಕಿನ ಕೊಪ್ಪಳ ಜಿಲ್ಲೆಯ ಭಗವತಿ ಬಿ ಎಂಬಲ್ಲಿನ ತಿಪ್ಪಮ್ಮ ಎಂಬ ಬಡ ಮಹಿಳೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಾತ್ಸಲ್ಯ ಮನೆ ಹಸ್ತಾಂತರಿಸಲಾಯಿತು.

ಕೊರೋನಾ ಸಂದರ್ಭ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಭಾಗದಲ್ಲಿರುವ ನಿರ್ಗತಿಕರಿಗೆ, ಮಾಸಾಶನ ಫಲಾನುಭವಿಗಳಿಗೆ ಯೋಜನೆಯ ಕಾರ್ಯಕರ್ತರ ಮೂಲಕ ಮಾಸಾಶನ ತಲುಪಿಸುವ ಕೆಲಸವನ್ನು ಮಾಡಿದೆ. ಈ ಸಂದರ್ಭ ಕಾರ್ಯಕರ್ತರು ಅವರ ಮನೆ ಭೇಟಿಯ ವರದಿಯೊಂದಿಗೆ ಫೋಟೋಗಳನ್ನು ಹೇಮಾವತಿ ವಿ. ಹೆಗ್ಗಡೆಯವರಿಗೆ ನೀಡಿದ್ದರು. ಈ ಫೋಟೋಗಳನ್ನು ಪರಿಶೀಲಿಸಿ ಫಲಾನುಭವಿಗಳಿಗೆ ವಾಸಕ್ಕೆ ಯೋಗ್ಯವಾದ ಸೂರಿಲ್ಲ, ಉಪಯೋಗಿಸಲು ಯೋಗ್ಯವಾದ ಬಟ್ಟೆ,ಪಾತ್ರೆಗಳಿಲ್ಲ ಎಂಬುದನ್ನು ಮನಗಂಡರು.

ಆದ್ದರಿಂದ ಮಾಸಾಶನ ಫಲಾನುಭವಿಗಳ ಸರ್ವೆ ಮಾಡಿಸುವ ಮೂಲಕ ಅವರಿಗೆ ಬೇಕಾದ ವಾತ್ಸಲ್ಯ ಕಿಟ್‌ಗಳನ್ನು, ದೈನಂದಿನ ಬಟ್ಟೆ, ಪಾತ್ರೆ ಕಿಟ್ಟುಗಳನ್ನು ಆಹಾರಕ್ಕೆ ಬೇಕಾದ ಪೌಷ್ಠಿಕ ಮಿಕ್ಸ್ ಪುಡಿಯನ್ನು ವ್ಯವಸ್ಥೆ ಮಾಡಿದ್ದರು. ಅದೇ ರೀತಿ ವಾಸಕ್ಕೆ ಯೋಗ್ಯವಿಲ್ಲದ ಮನೆಗಳಿರುವ ಫಲಾನುಭವಿಗಳಿಗೆ ನೆಮ್ಮದಿಯ ಜೀವನ ನಡೆಸಲು ಬೇಕಾದ ಸೂರನ್ನು ಕಟ್ಟಿಕೊಡುವ ವಾತ್ಸಲ್ಯ ಮನೆಯ ನಿರ್ಮಾಣಕ್ಕೆ ಕೈಹಾಕಿದ್ದರು.

ಕೊಪ್ಪಳ ಪ್ರಾದೇಶಿಕ ವ್ಯಾಪ್ತಿಯಲ್ಲಿ ಇದುವರೆಗೆ 112 ಮನೆ ನಿರ್ಮಾಣವಾಗಿದ್ದು ಪ್ರಸ್ತುತ ವರ್ಷ 35 ವಾತ್ಸಲ್ಯ ಮನೆ ನಿರ್ಮಾಣವಾಗಿದೆ. ಸಿಂಧನೂರು ತಾಲೂಕಿನಲ್ಲಿ ಇದುವರೆಗೆ 2 ಮನೆ ನಿರ್ಮಾಣವಾಗಿದೆ. ಇದೀಗ ಫಲಾನುಭವಿ ತಿಪ್ಪಮ್ಮನವರಿಗೆ 1,35,000ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ಕೊಡಲಾಗಿದೆ.

ಯೋಜನಾಧಿಕಾರಿ ಬಸವರಾಜ್

ಪ್ರಾದೇಶಿಕ ಕೊಪ್ಪಳ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ್ ಜೆ., ತಾಲೂಕು ಪಂಚಾಯತ್ ಮಾಜಿ ಸದಸ್ಯ ರಾಜಶೇಖರ್ ಮುದೇನವರ್, ಬಾಗಲಕೋಟೆ ಜಿಲ್ಲಾ ನಿರ್ದೇಶಕ ಚನ್ನಕೇಶವ, ನಿವೃತ್ತ ಪೊಲೀಸ್ ಅಧಿಕಾರಿ ಶ್ರೀಧರ್ ಬಸಪ್ಪ ಪದರ, ಕೋಣಮ್ಮ ದೇವಿ ದೇವಸ್ಥಾನದ ಟ್ರಸ್ಟಿ ಮಲ್ಲಣ್ಣ ರಕ್ಕ ರೆಡ್ಡಿ, ಕಾಂತಪ್ಪ ಅಸೂಟಿ, ಪ್ರಭು ದೊಡ್ಡಮನಿ, ಗ್ರಾಮ ಪಂಚಾಯತ್ ಸದಸ್ಯರು, ವಾತ್ಸಲ್ಯ ಫಲಾನುಭವಿ ಬಸಯ್ಯ ಹಿರೇಮಠ, ಬಾಗಲಕೋಟೆ ತಾಲೂಕು ಕ್ಷೇತ್ರ ಯೋಜನಾಧಿಕಾರಿ. ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

04/03/2026 09:49 pm

Cinque Terre

3.34 K

Cinque Terre

0