ಕೊಪ್ಪಳ: ಮಹಾರಾಷ್ಟ್ರದಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 27 ಹಸುಗಳು ಹಾಗೂ 4 ಎಮ್ಮೆಗಳನ್ನು ಕೊಪ್ಪಳದಲ್ಲಿ ರಕ್ಷಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೇನರ್ ಮೂಲಕ ಜಾನುವಾರುಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ, ರಾಷ್ಟ್ರೀಯ ರಕ್ಷಣಾ ಪಡೆ, ಗದಗದ ಭಗತ್ ಸಿಂಗ್ ಸೇವಾ ಸಮಿತಿ ಹಾಗೂ ಕೊಪ್ಪಳದ ಭಜರಂಗದಳದ ಕಾರ್ಯಕರ್ತರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ವಾಹನವನ್ನು ತಡೆದಿದ್ದಾರೆ.
ರಕ್ಷಿಸಲಾದ ಎಲ್ಲಾ ಜಾನುವಾರುಗಳನ್ನು ಸುರಕ್ಷಿತವಾಗಿ ಕೊಪ್ಪಳದ ಜೈನ್ ಗೋಶಾಲೆಗೆ ಸೇರಿಸಲಾಗಿದೆ. ಈ ಕುರಿತು ಕಂಟೇನರ್ ಮಾಲೀಕ ಹಾಗೂ ಚಾಲಕನ ವಿರುದ್ಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Kshetra Samachara
05/03/2026 06:51 pm
LOADING...