ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಹುಲಿಗೆಮ್ಮಗೆ ಶಾಸಕ ರಾಘವೇಂದ್ರ ಹಿಟ್ನಾಳ ವಿಶೇಷ ಪೂಜೆ!

ಕೊಪ್ಪಳ: ಕೊಪ್ಪಳದ ಪ್ರಸಿದ್ಧ ಆದಿ‌ಪರಾಶಕ್ತಿ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನದ ದೇವಾಲಯವನ್ನು ಪುನರ್ ನಿರ್ಮಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಹೊಸ ವಿನ್ಯಾಸದೊಂದಿಗೆ ಶ್ರೀ ಹುಲಿಗೆಮ್ಮ ದೇವಸ್ಥಾನವನ್ನು 9 ಕೋಟಿ ರೂಪಾಯಿಯಲ್ಲಿ ನಿರ್ಮಿಸಲು ಉದ್ದೇಶಿಸಿದೆ .‌ಇಂದು ಹುಲಿಗೆಮ್ಮ ದೇವಸ್ಥಾನದ ನಿರ್ಮಾಣಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಸಂಸದ ರಾಜಶೇಖರ ಹಿಟ್ನಾಳ‌ ಪೂಜೆ ಮಾಡಿ ಚಾಲನೆ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಂಸದ ಸಂಗಣ್ಣ ಕರಡಿ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಸೇರಿ ಹಲವು ಅಧಿಕಾರಿಗಳು ಇದ್ದರು. ಈ ವೇಳೆ ಪೂಜೆ ಪುನಸ್ಕಾರ ಮಾಡಿ ದೇವಸ್ಥಾನ ನಿರ್ಮಾಣ ಮಾಡಲು ಚಾಲನೆ ನೀಡಲಾಯಿತು. ಅದಷ್ಟು ಬೇಗ ದೇವಸ್ಥಾನ ಪುನರ್ ನಿರ್ಮಾಣ ಆಗಲಿ ಅಂತ ಊರಿನ ಭಕ್ತಾದಿಗಳು ಪ್ರಾರ್ಥಿಸಿ ಕೊಂಡಿದ್ದಾರೆ.

Edited By :
PublicNext

PublicNext

21/03/2026 12:02 pm

Cinque Terre

5.68 K

Cinque Terre

0