ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಮುಖ್ಯ ರಸ್ತೆಯಲ್ಲಿ ಇರೋ ಕಸ!

ಕೊಪ್ಪಳ: ನಗರಸಭೆಯ ನಿರ್ಲಕ್ಷ್ಯಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಕೊಪ್ಪಳ ನಗರದ ಹೃದಯ ಭಾಗದಲ್ಲಿರುವ ಸಾಲರಜಂಗ್ ರಸ್ತೆಯಲ್ಲಿ ಕೊಳಚೆ ನೀರು. ರಾಶಿ ರಾಶಿ ಕಸ ಬಿದ್ದಿದೆ. ಮುಖ್ಯ ರಸ್ತೆಯಲ್ಲಿಯೇ ಕೊಳಚೆ ಇದ್ದರೂ ಕೊಪ್ಪಳ ನಗರಸಭೆ ಇತ್ತ ಗಮನ ಹರಿಸಿಲ್ಲ. ಈ ಕೊಳಚೆ ಪ್ರದೇಶದಿಂದ ದುರ್ವಾಸನೆ ಹರಡುತ್ತಿದೆ. ಕೊಳಚೆ ಪ್ರದೇಶದಿಂದ ನೀರಿನಲ್ಲಿ ಸೊಳ್ಳೆಗಳಿಂದಾಗಿ ರೋಗ ಹರಡುವ ಭೀತಿ ಇದೆ. ಮುಖ್ಯರಸ್ತೆಯಲ್ಲಿಯೇ ಇಂಥ ಸ್ಥಿತಿ ಇರುವದಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಸ & ಕೊಳಚೆ ನಿರ್ವಹಣೆ ಮಾಡುವಂತೆ ಒತ್ತಾಯಿಸಿದ್ದಾರೆ. ಜನರಿಗೆ ಅನಾರೋಗ್ಯ ಕಾಡುವ ಭೀತಿ ಎದುರಾಗಿದೆ. ಮಳೆಗಾಲ ಬರೋ ಹಿನ್ನಲೆ ಕಸಕ್ಕೆ ನೀರು ಬಿದ್ದರೆ ಗಬ್ಬು ನಾರುತ್ತೆ. ಹೆಲ್ತ್ ಇಶ್ಯೂ ಕೂಡ ಶುರುವಾಗುತ್ತೆ.

Edited By : Somashekar
PublicNext

PublicNext

17/03/2026 11:16 am

Cinque Terre

8.08 K

Cinque Terre

0