ಕೊಪ್ಪಳ: ರಾತ್ರೋರಾತ್ರಿ ಅನಧಿಕೃತ ಚರ್ಚ್ ನಿರ್ಮಿಸಲು ಪ್ರಭಾವಿಗಳು ಮುಂದಾಗಿದ್ರು . ಕಾಮಗಾರಿ ತಡೆದು ಗ್ರಾಮಪಂಚಾಯತ್ ಪಿಡಿಓ ನೋಟಿಸ್ ಕೊಟ್ಟಿದ್ದಾರೆ. ಗಂಗಾವತಿ ತಾಲೂಕಿನ ಮರಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಪ್ರಗತಿನಗರ ಗ್ರಾಮದ 4 ನೇ ವಾರ್ಡಿನಲ್ಲಿ ರಾತ್ರೋರಾತ್ರಿ ಅನಧಿಕೃತವಾಗಿ ಚರ್ಚ್ ನಿರ್ಮಿಸಲು ಮಹಿಳೆ ಸೇರಿದಂತೆ ಕೆಲ ಜನ್ರು ಮುಂದಾದ ಘಟನೆ ಕಳೆದ ಎರಡನೇ ತಾರೀಖನಂದು ನಡೆದಿದೆ.
ಅನಧಿಕೃತ ಚರ್ಚ್ ನಿರ್ಮಾಣ ಸೇರಿದಂತೆ ಗ್ರಾಮದಲ್ಲಿ ಒತ್ತಡದ ಮತಾಂತರ ಬಗ್ಗೆ ಪ್ರಗತಿನಗರ ಗ್ರಾಮದ ಜನ್ರು ಲಿಖಿತ ರೂಪದಲ್ಲಿ ಗ್ರಾಮಪಂಚಾಯತ್ , ತಾಲೂಕ ಪಂಚಾಯತ, ತಹಶಿಲ್ದಾರ್ ಕಚೇರಿಗೆ ಪತ್ರ ಬರೆದು ತಕ್ಷಣವೇ ಚರ್ಚ್ ನಿರ್ಮಾಣ ತಡೆಹಿಡಿಯುವಂತೆ ಮನವಿ ಸಲ್ಲಿಸಿದ್ದಾರೆ.
ಪ್ರಗತಿನಗರ ಗ್ರಾಮದ ಎಂ.ಸುಶೀಲಾ ಕೃಷ್ಣರಾವ್ ಎನ್ನುವವರು ಖಾಸಗಿ ನಿವೇಶನದಲ್ಲಿ ಯಾವುದೇ ಪರವಾನಗಿ ಪಡೆಯದೇ ಈ ಮಹಿಳೆ ಕೆಲ ಪ್ರಭಾವಿಗಳ ಕರೆತಂದು ಚರ್ಚ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಇನ್ನೂ ಯಾವುದೇ ಪರವಾನಗಿ ಪಡೆಯದೇ ಡಿಜೆ ಸೌಂಡ್ ಸಿಸ್ಟಮ್ ಬಳಸಿ ಹಾಡು ಹಾಕುವುದು, ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡು ಕಾಮಗಾರಿ ನಡೆಸುತ್ತಿರೋದು ಬೆಳಕಿಗೆ ಬಂದಿದೆ. ಈ ಎಲ್ಲಾ ಚಟುವಟಿಕೆಗಳು ಸ್ಥಳೀಯವಾಗಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಅನಧಿಕೃತ ಚರ್ಚ್ ಕಾಮಗಾರಿ ನಿಲ್ಲಿಸುವಂತೆ ಹಾಗೂ ನಮ್ಮಗಳ ಮೇಲೆ ಆಗುತ್ತಿರುವ ದೌರ್ಜನ್ಯದ ಮತಾಂತರವನ್ನು ತಡೆಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.
ಇಷ್ಟಾದ್ರೂ ಅನಧಿಕೃತ ಚರ್ಚ್ ನಿರ್ಮಾಣಕ್ಕೆ ರಾಜಕೀಯ ವ್ಯಕ್ತಿಗಳ ಸಪೋರ್ಟ್ ಇದೆ. ನಾನು ಅನಧಿಕೃತವಾಗಿ ಚರ್ಚ್ ನಿರ್ಮಾಣ ಮಾಡ್ತೇನೆ ಎಂದು ರಾತ್ರೋರಾತ್ರಿ ಕಳೆದ ಮಾರ್ಚ್ ಎರಡರಂದು ಹೊರ ಜಿಲ್ಲೆಯ ಜನ್ರನ್ನು ಕರೆತಂದು ಈ ಮಹಿಳೆ ಕಾಮಗಾರಿ ಮುಗಿಸಲು ಮುಂದಾಗಿದ್ರು.
ಇದನ್ನು ಮನಗಂಡ ಗ್ರಾಮಸ್ಥರು ತಹಶಿಲ್ದಾರ್, ತಾಲೂಕಪಂಚಾಯತ್ ಇಓ, ಪಿಡಿಓಗೆ ಕರೆ ಮಾಡಿ ಕಾಮಗಾರಿ ನಿಲ್ಲಿಸಿ ಇಲ್ಲವಾದಲ್ಲಿ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದ್ರು. ಇದನ್ನು ಅರಿತ ಪಿಡಿಓ ಇದೀಗ ಕಾಮಗಾರಿ ನಿಲ್ಲಿಸಿ ಕಾನೂನು ಪರಿಪಾಲನೆ ಮಾಡಿದ್ದಾರೆ.
PublicNext
07/03/2026 10:24 pm