ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಕಲ್ಬೆನ್ನೂರಿನಲ್ಲಿ ವಾತ್ಸಲ್ಯ ಮನೆ ಹಸ್ತಾಂತರ

ಕಲಬುರಗಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಕಲಬುರಗಿಯ ಆದರ್ಶ ನಗರದ ಕಲ್ಬೆನ್ನೂರಿನಲ್ಲಿ ಭೀಮಾಬಾಯಿ ಎಂಬ ಬಾಲಕಿಯ ಕುಟುಂಬಕ್ಕೆ ವಾತ್ಸಲ್ಯ ಮನೆ ಹಸ್ತಾಂತರಿಸಲಾಯಿತು.

ವಾತ್ಸಲ್ಯ ಫಲಾನುಭವಿ ಭೀಮಬಾಯಿಗೆ ಹೆತ್ತವರಿಲ್ಲ. ಈಕೆ ಸಹೋದರನೊಂದಿಗೆ ಅಜ್ಜ-ಅಜ್ಜಿಯ ಆಸರೆಯಲ್ಲಿ ಜೀವನ ಮಾಡುತ್ತಿದ್ದಾರೆ‌. ಈಕೆಯ ಮನೆ ಸಂಪೂರ್ಣ ದುರಸ್ತಿಯಲ್ಲಿದ್ದು, ಮಳೆಗಾಲದಲ್ಲಿ ಮನೆಯಲ್ಲಿ ಇರುವುದು ಬಹಳ ಕಷ್ಟವಾಗಿತ್ತು. ವಯಸ್ಸಾದ ಅಜ್ಜ ಅಜ್ಜಿ ದುಡಿಯುವ ಸ್ಥಿತಿಯಲ್ಲಿಲ್ಲ. 10ವರ್ಷದ ಭೀಮಾಬಾಯಿಯೇ ದುಡಿದು ಎಲ್ಲರನ್ನೂ ನೋಡಿಕೊಳ್ಳಬೇಕಾಗಿತ್ತು. ಇವರಿಗೆ ಯೋಜನೆಯಿಂದ ಪ್ರತಿ ತಿಂಗಳು 1,000 ಮಾಶಾಸನ ಹಾಗೂ ಸಹೋದರನ ವಿದ್ಯಾರ್ಜನೆಗಾಗಿ ವಿದ್ಯಾನಿಧಿ ನೀಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ವಾತ್ಸಲ್ಯ ಮನೆ ನಿರ್ಮಾಣ ಮಾಡಿ ಹಸ್ತಾಂತರ ಮಾಡಲಾಯಿತು.

ವಾತ್ಸಲ್ಯ ಮನೆ ಹಸ್ತಾಂತರದ ಸಂದರ್ಭ ಕಲಬುರಗಿ ಜಿಲ್ಲಾ ಜನಜಾಗೃತಿ ಅಧ್ಯಕ್ಷ ಸಿ ಎನ್. ಬಾಬಳಗಾಂವ, ಸಣ್ಣೂರು ಗ್ರಾಪಂ ಅಧ್ಯಕ್ಷ ರಾಜು, ಕಲ್ಬೆನ್ನೂರು ಗ್ರಾಮದ ಮುಖಂಡ ಷಣ್ಮುಖ ರೆಡ್ಡಿ, ಸಣ್ಣೂರು ಗ್ರಾಪಂ ಉಪಾಧ್ಯಕ್ಷ ಅಣ್ವೀರಪ್ಪ, ಊರಿನ ಮುಖಂಡರಾದ ಸೂರ್ಯಕಾಂತ್, ಕಲ್ಬೆನ್ನೂರು ಎಸ್ ಡಿ ಎಂ ಸಿ ಯ ಅಧ್ಯಕ್ಷ ಲಕ್ಷ್ಮಣ, ಯೋಜನೆಯ ಅಧಿಕಾರಿಗಳಾದ ರಿಯಾಜ್, ಅತ್ತಾರ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಮಮತಾ, ಮೇಲ್ವಿಚಾರಕ ಅಮರ್ ಮತ್ತಿತರರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

08/03/2026 11:04 pm

Cinque Terre

3.76 K

Cinque Terre

0