ಜೇವರ್ಗಿ: ಬಿಳವಾರ ಗ್ರಾಮದ ಮಾಸಾಶನ ಫಲಾನುಭವಿಯಾದ ಚಂದ್ರಮ್ಮ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಮನೆ ಹಸ್ತಾಂತರಿಸಲಾಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜೇವರ್ಗಿ ತಾಲೂಕಿನ ಯೋಜನಾಧಿಕಾರಿ ದಿನೇಶ್ ಮತ್ತು ಬಿಳವಾರ ಪಂಚಾಯತ್ ಪಿಡಿಒ ಹರಳಯ್ಯ, ಪಂಚಾಯತಿ ಸದಸ್ಯ ಬಸವರಾಜ್, ಬಸವರಾಜ ಮುಡಬೋಳ, ರಮೇಶ್ ಗೌಡಿಗೇರಿ ಇವರ ಉಪಸ್ಥಿತಿಯಲ್ಲಿ ಚಂದ್ರಮ್ಮ ಅವರಿಗೆ ವಾತ್ಸಲ್ಯ ಹಸ್ತಾಂತರಿಸಲಾಯಿತು.
ಯೋಜನಾಧಿಕಾರಿ ದಿನೇಶ್ ಅವರು ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತೀರಾ ಅಸಹಾಯಕರನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಸೌಲಭ್ಯ ಒದಗಿಸುತ್ತಿದೆ. ಇಂತಹ ಪುಣ್ಯದ ಕಾರ್ಯವನ್ನು ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ ಹೆಗ್ಗಡೆ ಅವರಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಬಿಳವಾರ ಪಂಚಾಯತ್‌ನ ಪಿಡಿಒ ಹರಳಯ್ಯ ಮಾತನಾಡಿ, ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಕೃತಜ್ಞತಾ ಭಾವನೆಯನ್ನು ತಿಳಿಸುವುದರೊಂದಿಗೆ ತಾವು ಕೂಡ ಯೋಜನೆಯ ಸೌಲಭ್ಯಗಳನ್ನು ಜನರಿಗೆ ತಿಳಿಸುವುದಾಗಿ ಸದುಪಯೋಗಪಡಿಸಿಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭ ತಾಲೂಕಿನ ಮಾನ್ಯ ಯೋಜನಾಧಿಕಾರಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಲ್ಲಮ್ಮ ಸ್ಥಳೀಯ ಸೇವಾ ಪ್ರತಿನಿಧಿಗಳಾದ ಬಸವರಾಜ್ ಸೇವಾದಾರ ಜ್ಯೋತಿ, ಬಿಳವಾರ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.
PublicNext
13/03/2026 03:00 pm