ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಮಲ್ಲಿಕಾರ್ಜುನ ಮುತ್ಯಾ ಜಾಮೀನು ಅರ್ಜಿ ವಜಾ

ಯಾದಗಿರಿ‌: ಜಿಲ್ಲೆಯ ಮಹಲರೋಜಾ ಮಠದ ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾಗೆ ಯಾದಗಿರಿ‌ ಜಿಲ್ಲಾ ಸತ್ರ ನ್ಯಾಯಾಲಯ ಬಿಗ್ ಶಾಕ್ ನೀಡಿದೆ.

ಪೋಕ್ಸೋ ಕೇಸ್‌ನಲ್ಲಿ (POCSO Case) ಕಳೆದ ವಾರ ವಿಚಾರಣೆ ಎದುರಿಸಿದ್ದ ಮಲ್ಲಿಕಾರ್ಜುನ ಮುತ್ಯಾ ಸಲ್ಲಿಸಿದ್ದ ಜಾಮೀನು (Bail) ಅರ್ಜಿ ಇಂದು ತಿರಸ್ಕಾರಗೊಂಡಿದೆ.

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ ಆರೋಪ ಎದುರಿಸುತ್ತಿರುವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಯಾದಗಿರಿಯ ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಮುತ್ಯಾ ಅರ್ಜಿ ಸಲ್ಲಿಸಿದ್ದು, ಇಂದು (ಸೋಮವಾರ) ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗೌರವಾನ್ವಿತ ಮರುಳಸಿದ್ದರಾಧ್ಯ ಅವರು ಜಾಮೀನು ತಿರಸ್ಕರಿಸಿದ್ದಾರೆ. ಇದೀಗ ಮುತ್ಯಾಗೆ ಬಂಧನ ಭೀತಿ ಎದುರಾಗಿದೆ ಎನ್ನಲಾಗುತ್ತಿದೆ.

Edited By :
PublicNext

PublicNext

09/03/2026 07:54 pm

Cinque Terre

10.67 K

Cinque Terre

0