ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ವಜ್ಜಲ್ ಗ್ರಾಮದ ಬಳಿಯ ಬತ್ತದ ಹೊಲದಲ್ಲಿ ಮೊಸಳೆ ಪ್ರತ್ಯಕ್ಷಗೊಂಡು ಅನ್ನದಾತರು ಬೆಚ್ಚಿಬೀಳುವಂತೆ ಮಾಡಿತ್ತು,. ಜಮೀನಿಗೆ ನುಗ್ಗಿದ ಬೃಹತ್ ಗಾತ್ರದ ಮೊಸಳೆ ಕಂಡು ರೈತರು ಕೆಲಕಾಲ ಆತಂಕಗೊಳ್ಳುವಂತಾಗಿತ್ತು, ಗ್ರಾಮದ ಸಾಬಮ್ಮ ಬೈಚಬಲ್ ಎಂಬುವರ ಜಮೀನಿನಲ್ಲಿ ಮೊಸಳೆ ಕಾಣಿಸಿಕೊಂಡಿತ್ತು, ಸುದ್ದಿ ತಿಳಿದು ಬೃಹತ್ ಗಾತ್ರದ ಮೊಸಳೆ ನೋಡಲು ಗ್ರಾಮಸ್ಥರು ದಂಡು ದಂಡಾಗಿ ಓಡೋಡಿ ಬಂದರು, ಬತ್ತದ ಹೊಲಕ್ಕೆ ನುಗ್ಗಿದ ಮೊಸಳೆ ಹಿಡಿಯಲು ಗ್ರಾಮಸ್ಥರು ಹೈರಾಣಾಗಿ ಹೋದರು, ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿ ಮೊಸಳೆ ಸೆರೆ ಹಿಡಿದಿದ್ದಾರೆ.
PublicNext
21/03/2026 10:51 pm
LOADING...