ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ನೂತನ ಶಾಲಾ ಕಟ್ಟಡಕ್ಕೆ 21 ಲಕ್ಷ ದೇಣಿಗೆ ನೀಡಿದ ಶರಣೆ ಶ್ರೀ ಶಿವಲೀಲಾ ಶಿಕ್ಕೇರಿಮಠ

ಅಣ್ಣಿಗೇರಿ: ತಾಲೂಕಿನ ಮಣಕವಾಡ ಗ್ರಾಮದಲ್ಲಿ ಶ್ರೀ ಅಭಿನವ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ನಿರ್ಮಾಣವಾಗುತ್ತಿರುವ ನೂತನ ಶಾಲಾ ಕಟ್ಟಡಕ್ಕೆ ಶರಣೆ ಶ್ರೀ ಶಿವಲೀಲಾ ಶಿಕ್ಕೇರಿಮಠ ಅವರು 21 ಲಕ್ಷಗಳನ್ನು ದೇಣಿಗೆ ನೀಡುವುದರ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದಾರಿ ಮಾಡಿಕೊಟ್ಟಿದ್ದಾರೆ.

ಸದಾ ಸಮಾಜ ಸೇವೆಯಲ್ಲಿ ತೊಡಗಿರುವ ಅಭಿನವ ಮೃತ್ಯುಂಜಯ ಶ್ರೀಗಳಿಗೆ ನೆರವಾಗಲೆಂದು ಶಾಲಾ ಕಟ್ಟಡಕ್ಕೆ ದೇಣಿಗೆ ನೀಡಿದ್ದೇನೆ, ಮತ್ತಷ್ಟು ಅವರ ಸಮಾಜ ಸೇವೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರ ಸೇವೆ ನಿರಂತರವಾಗಿ ಸಾಗುತ್ತಿರಲೆಂದು ಶರಣೆ ಶ್ರೀ ಶಿವಲೀಲಾ ಶಿಕ್ಕೇರಿಮಠ ಅವರು ಇದೇ ವೇಳೆ ಹೇಳಿದರು. ಇನ್ನು ಮಠದ ವತಿಯಿಂದ ಅವರಿಗೆ ಗೌರವಾಭಿನಂದನ ಪತ್ರ ಸಲ್ಲಿಸಿ ನಾಡಿನ ಪ್ರಮುಖ ಶ್ರೀಗಳ ಸಮ್ಮುಖದಲ್ಲಿ ಗೌರವಿಸಲಾಯಿತು.

Edited By : PublicNext Desk
Kshetra Samachara

Kshetra Samachara

10/03/2026 12:42 pm

Cinque Terre

5.26 K

Cinque Terre

0