ಅಣ್ಣಿಗೇರಿ: ಅಣ್ಣಿಗೇರಿ: ಹಿಂದೂ ಸಮ್ಮೇಳನದ ಅಂಗವಾಗಿ ಭಾರತ ಮಾತೆ ಚಿತ್ರದ ಮೆರವಣಿಗೆಯು ಸಕಲ ವಾದ್ಯದೊಂದಿಗೆ ಅದ್ದೂರಿಯಾಗಿ ಪಟ್ಟಣದಲ್ಲಿ ನೆರವೇರಿತು. ಮೆರವಣಿಗೆಯ ಮಧ್ಯೆ ಮುಸ್ಲಿಂ ಬಾಂಧವರು ತಂಪು ಪಾನೀಯ ವಿತರಿಸಿ, ಸೌಹಾರ್ದ ಮೆರೆದರು.ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಿಂದ ಆರಂಭವಾದ ಮೆರವಣಿಗೆ ವಾಲ್ಮೀಕಿ ನಗರದ ರಾಜಯೋಗಿ ತೋಟಪ್ಪ ದೇಸಾಯಿ ವೇದಿಕೆ ತಲುಪಿತು. ಮಾರ್ಗದುದ್ದಕ್ಕೂ ರಂಗೋಲಿ ಬಿಡಿಸಿ, ತಳಿರು ತೋರಣದಿಂದ ಸಿಂಗರಿಸಲಾಗಿತ್ತು. ಝಾಂಜ್ ಮೇಳ, ಹಲಗೆ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ತಂದವು.ಉದ್ಯಮಿ ಚಂಬಣ್ಣ ಸುರಕೋಡ ಮೆರವಣಿಗೆಗೆ ಚಾಲನೆ ನೀಡಿದರು. ವಿನಾಯಕ ಭಾಷಣ ಮಠದ ತೇರದಾಳ ದಿಕ್ಕುಚಿ ಮಾಡಿದರು. ದಾಸೋಹ ಮಠದ ಡಾ. ಶಿವಕುಮಾರ ಸ್ವಾಮೀಜಿ, ಪ್ರಭುಲಿಂಗ ದೇವರು, ಷಣ್ಮುಖ ಗುರಿಕಾರ, ದೇವರಾಜ ದಾಡಿಬಾವಿ, ಶಿವಯೋಗಿ ಸುರಕೋಡ, ಶಿವಾನಂದ ಹೊಸಳ್ಳಿ, ಭರತೇಶ ಜೈನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Kshetra Samachara
12/03/2026 07:53 am
LOADING...