ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಹೆರಿಗೆ ಬಳಿಕ ಬಾಣಂತಿ ಸಾವು - ವೈದ್ಯರ ನಿರ್ಲಕ್ಷ್ಯ ಆರೋಪ

ಚಿತ್ರದುರ್ಗ: ಹೆರಿಗೆಯಾದ ತಕ್ಷಣ ಬಾಣಂತಿ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯ ಆರೋಪ ಕೇಳಿ ಬಂದಿದೆ. ಬಾಣಂತಿ ಸಾವು, ನವಜಾತ ಶಿಶು ಸ್ಥಿತಿ ಗಂಭೀರವಾಗಿದ್ದು, ICUನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಪತ್ರೆಯ ವೈದ್ಯಾಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಘಟನೆ ನಡೆದಿದೆ. ಬೊಮ್ಮನಕುಂಟೆ ಗ್ರಾಮದ ಶಿಲ್ಪ(29) ಮೃತ ಬಾಣಂತಿ ಮಹಿಳೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೊಮ್ಮನಕುಂಟೆ ಗ್ರಾಮ ನಿವಾಸಿ ಶಿಲ್ಪಾ. ನಿನ್ನೆ ಮಧ್ಯಾಹ್ನ ಮೂರನೇ ಹೆರಿಗೆಗೆ ಜಿಲ್ಲಾಸ್ಪತ್ರೆ ಶಿಲ್ಪ ಬಂದಿದ್ದರು. ನಾರ್ಮಲ್ ಹೆರಿಗೆ ಮಾಡಿಸಲು ಡ್ಯೂಟಿ ಡಾಕ್ಟರ್ ನಿರ್ಲಕ್ಷ್ಯ ಮಾಡಿರುವ ಆರೋಪ ಕೇಳಿ ಬಂದಿದೆ.

ಪಿಜಿ ಡಾಕ್ಟರ್, ಡ್ಯೂಟಿ ನರ್ಸ್ ಹೆರಿಗೆ ಮಾಡಿಸಿದ ಆರೋಪ ಕೇಳಿ ಬಂದಿದೆ. ಸಹಜ ಡೆಲಿವರಿ ಆದ ತಕ್ಷಣ ಬಾಣಂತಿ ಶಿಲ್ಪ ಸಾವನ್ನಪ್ಪಿದ್ದಾರೆ. ಜಿಲ್ಲಾಸರ್ಜನ್ ಡಾ. ರವೀಂದ್ರಗೆ ಶಿಲ್ಪ ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

Edited By :
PublicNext

PublicNext

10/03/2026 08:31 pm

Cinque Terre

17.04 K

Cinque Terre

0

ಸಂಬಂಧಿತ ಸುದ್ದಿ