ಗದಗ : ಲಕ್ಷ್ಮೇಶ್ವರ ಪಟ್ಟಣದ 1ನೇ ವಾರ್ಡ ದ್ಯಾಮವ್ವನ ಗುಡಿ ಹತ್ತಿರ ವಿದ್ಯುತ್ ತಂತಿ ಕಟ್ಟಾಗಿ ಒಂದು ಗಾಡಿ ಶೇಂಗಾ ಹೊಟ್ಟು, ಒಂದು ಗಾಡಿ ಗೋವಿನ ಜೋಳದ ರವದಿ ಹಾಗೂ ಕಟ್ಟಿಗೆ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಬುಧವಾರ ಸಂಭವಿಸಿದೆ.
ದ್ಯಾಮವ್ವನ ಗುಡಿ ಹಿಂಭಾಗದಲ್ಲಿರುವ ಹನುಮಂತಗೌಡ ರುದ್ರಗೌಡ ಪಾಟೀಲ್ ಅವರ ಜಾಗದಲ್ಲಿ ಪಾರಮ್ಮ ಕಡಕೋಳ ಅವರಿಗೆ ಸೇರಿದ 1 ಗಾಡಿ ಶೇಂಗಾ ಹೊಟ್ಟಿನ ಬನವಿ, 1ಗಾಡಿ ಗೋವಿನ ಜೋಳದ ರವದಿ ಹಾಗೂ ಕಟ್ಟಿಗೆ ಹಾಕಿದರು. ವಿದ್ಯುತ್ ತಂತಿ ಕಟ್ಟಾಗಿ ಸ್ಪರ್ಶದಿಂದ ಬೆಂಕಿ ಹೊತ್ತಿಕೊಂಡಿದ್ದರಿಂದ ಅನಾಹುತ ಸಂಭವಿಸಿದೆ.
ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದಂತೆ ವೀರಭದ್ರಗೌಡ ಪಾಟೀಲ ಅಗ್ನಿಶಾಮಕ್ಕೆ ಕರೆ ಮಾಡಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿಯವರು ದಾವಿಸಿ ಬೆಂಕಿ ನಂದಿಸಿಸು ಕಾರ್ಯ ಮಾಡಿದರು ದೇವರ ಅದೃಷ್ಟವಶಾತ್ ಯಾವುದು ಪ್ರಾಣ ಹಾನಿಯಾಗಿಲ್ಲ.
ನಂತರ ಸಾರ್ವಜನಿಕರು ಬೇಸಿಗೆಕಾಲದಲ್ಲಿ ವಿದ್ಯುತ್ ತಂತಿ ಬಿಸಿಲಿನ ತಾಪಕ್ಕೆ ನೇತಾಡುತ್ತಿದ್ದು ವಿದ್ಯುತ್ ತಂತಿಗಳನ್ನು ಕೆಇಬಿ ಸಿಬ್ಬಂದಿಗೆ ತಂತಿಗಳನ್ನು ನೇತಾಡದ ಹಾಗೆ ಬಿಗಿಯಾಗಿ ಸರಿ ಮಾಡಬೇಕೆಂದು ಹೇಳಿದರು.
ಸುರೇಶ ಎಸ್ ಲಮಾಣಿ ಪಬ್ಲಿಕ್ ನೆಕ್ಸ್ಟ್ ಗದಗ
Kshetra Samachara
11/03/2026 05:23 pm
LOADING...