ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಕಾನೂನು ಉಲ್ಲಂಘಿಸಿ ಅಬಕಾರಿ ಇಲಾಖೆಯಿಂದ ಸಿಎಲ್ 7 ಲೈಸೆನ್ಸ್..?

ಗದಗ : ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ಕಾನೂನು ಉಲ್ಲಂಘನೆ ಮಾಡಿ ಅಬಕಾರಿ ಇಲಾಖೆಯವರೇ ಕಣ್ಣು ಮುಚ್ಚಿಕೊಂಡು ಮದ್ಯದ ಅಂಗಡಿ ಬಾರ್ ಅಂಡ್ ರೆಸ್ಟೋರೆಂಟ್ ಗೆ ಸಿಎಲ್.7 ಲೈಸೆನ್ಸ್ ನೀಡಲು ಮುಂದಾಗಿರುವುದು ಈ ಪ್ರದೇಶ ವ್ಯಾಪ್ತಿಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಅಬಕಾರಿ ಇಲಾಖೆಯ ಶಿರಹಟ್ಟಿ ವಿಭಾಗದ ಸಂಬಂಧಿ ಓರ್ವರನ್ನು ಸೇರಿದಂತೆ ಮೂವರು ಕೂಡಿ ಲೈಸೆನ್ಸ್ ಪಡೆಯಲು ತರಾತುರಿ ನಡೆಸಿರುವುದು ಇದಕ್ಕೆ ಅಧಿಕಾರಿಗಳು ತಾಳ ಹಾಕುತ್ತಿರುವುದು ಅನೇಕ ಸಂಶಯಕ್ಕೆ ಕಾರಣವಾಗಿದೆ.

ಮದ್ಯದ ಅಂಗಡಿ ಲೈಸೆನ್ಸ್ ನೀಡುವಾಗ ಸರಕಾರಿ ನಿಯಮಾವಳಿ ಪ್ರಕಾರ ಸರಕಾರಿ ಶಾಲೆಗಳು ಮತ್ತು ದೇವಸ್ಥಾನಗಳ ಒಂದು ನೂರು ಮೀಟರ್ ದೂರದಲ್ಲಿ ಇರಬೇಕು ಎಂಬುದು ಕಡ್ಡಾಯ ಆದರೆ ಈಗ ಸಿಎಲ್ 7 ಅರ್ಜಿ ಸಲ್ಲಿಸಿರುವವರು ಓರ್ವರು ಇಲಾಖೆಯವರ ಸಂಬಂಧಿಯಾಗಿದ್ದು ಮತ್ತು ಗೋಲ್ಮಾಲ್ ಮಾಡಿ ಕಾನೂನನ್ನು ಗಾಳಿಗೆ ತೂರಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ ಆದರೆ ಆರಂಭವಾಗಲಿರುವ ಮದ್ಯದ ಅಂಗಡಿಯ ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ಕೂಗಳತೆಯಲ್ಲಿಯೇ ಸರಕಾರಿ ಪ್ರಾಥಮಿಕ ಶಾಲೆ ನಂ.4 ಹಾಗೂ ಉನ್ನತೀಕರಣಗೊಂಡ ಶಾಲೆ ಇದಾಗಿದ್ದು 3 ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಇದ್ದಾರೆ ಜೊತೆಗೆ ಮುಕ್ತಿಮಂದಿರ ಧರ್ಮಕ್ಷೇತ್ರದ ಮಹಾದ್ವಾರ ಆದಿ ಕವಿ ಪಂಪನ ಮೂರ್ತಿ ಜೊತೆಗೆ ಸಮೀಪದಲ್ಲಿಯೇ ನ್ಯಾಯಾಧೀಶರ ನಿವಾಸ ಇದೆ ಈ ಎಲ್ಲಾ ಅಂಶಗಳನ್ನು ಗಮನಿಸದೆ ಭ್ರಷ್ಟಾಚಾರ ಮತ್ತು ಒತ್ತಡದ ಮೇಲೆ ಅಬಕಾರಿ ಇಲಾಖೆಯವರು ಕಣ್ಣುಮುಚ್ಚಿ ಸಿಎಲ್ 7 ನೀಡುತ್ತಿರುವುದು ಬೇಗುದಿಗೆ ಕಾರಣವಾಗಿದೆ ಜಿಲ್ಲಾಧಿಕಾರಿ ಸಮಾಜದ ಸ್ವಾಸ್ಥ್ಯ ಕಾಪಾಡಲು ಮತ್ತು ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುವುದನ್ನು ಹಾಗೂ ಸಮಾಜದಲ್ಲಿ ಶಾಂತಿ ನೆಮ್ಮದಿ ಕಾಪಾಡುವ ನಿಟ್ಟಿನಲ್ಲಿ ಈ ಸಿಎಲ್ 7 ರದ್ದು ಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರಲ್ಲದೆ ಅಬಕಾರಿ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ.

ಸುರೇಶ ಎಸ್ ಲಮಾಣಿ ಪಬ್ಲಿಕ್ ನೆಕ್ಸ್ಟ್ ಗದಗ

Edited By : Shivu K
PublicNext

PublicNext

21/03/2026 06:54 pm

Cinque Terre

7.09 K

Cinque Terre

0

ಸಂಬಂಧಿತ ಸುದ್ದಿ