ಶಿರಹಟ್ಟಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ದ್ವಾರದ ಬಳಿ ಇರುವ ಚರಂಡಿ ಕುಸಿದು ವರ್ಷಗಳೇ ಕಳೆದ್ರೂ ಯಾವೊಬ್ಬ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಇತ್ತ ಕಡೆ ಗಮನಹರಿಸದಿರುವುದು ಈ ಶಾಲಾ ಮಕ್ಕಳಿಗೆ ಜೀವಕ್ಕೆ ಕುತ್ತು ಎಂಬಂತಾಗಿದೆ.
ಶಿರಹಟ್ಟಿ ತಾಲೂಕಿನ ಸುಗನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ದ್ವಾರದ ಬಳಿಯಿರುವ ಚರಂಡಿ ಕುಸಿದಿದ್ದು, ಈ ಕುರಿತು ಶಾಲೆಯ ಮುಖ್ಯಶಿಕ್ಷಕರು ಒಂದು ವರ್ಷದ ಹಿಂದೆ ಸಿಡಿ ಸರಿಪಡಿಸುವಂತೆ ಮನವಿ ನೀಡಿದ್ರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಲಾಗ್ತಿದೆ.
ಮಕ್ಕಳು ದಿನನಿತ್ಯ ಓಡಾಡೋ ಜಾಗದಲ್ಲಿ ಈ ಚರಂಡಿ ಕುಸಿದಿದೆ. ವರ್ಷಗಳೆ ಕಳೆದ್ರೂ ದುರಸ್ತಿ ಭಾಗ್ಯ ಕಂಡಿಲ್ಲ, ಮಕ್ಕಳಿಗೆ ಏನಾದರೂ ಅಪಾಯ ಸಂಭವಿಸಿದ್ರೆ, ಅದಕ್ಕೆ ಹೊಣೆ ಯಾರು? ಎಂದು ಪೋಷಕರು ಆಕ್ರೋಶವನ್ನು ಹೊರಹಾಕಿದ್ದಾರೆ.
ಇಲ್ಲಿ ಅನಾಹುತ ಸಂಭವಿಸುವ ಮೊದಲು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಲಾ ಆಡಳಿತ ಮಂಡಳಿಯವರು ಮತ್ತು ಬನ್ನಿಕೊಪ್ಪ ಗ್ರಾಮದ ಪಿಡಿಒ ಇತ್ತ ಗಮನಹರಿಸಿ ಅಪಾಯಕಾರಿ ಚರಂಡಿಯನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.
ಗೌರೀಶ ನಾಗಶೆಟ್ಟಿ ಪಬ್ಲಿಕ್ ನೆಕ್ಸ್ಟ್ ಶಿರಹಟ್ಟಿ
Kshetra Samachara
10/03/2026 10:40 pm
LOADING...