ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಮಳೆ, ಗಾಳಿ ಅಬ್ಬರ- ನೆಲ ಕಚ್ಚಿದ ಬಾಳೆ, ಪಪ್ಪಾಯ ಬೆಳೆ

ಗದಗ: ರೈತರು ಖುಷಿ ಪಡುವ ಹಬ್ಬವಾದ ಯುಗಾದಿ ಹಬ್ಬದಂದೇ ಗಾಳಿ, ಮಳೆ ರೈತನ ಖುಷಿ ಕಸಿದುಕೊಂಡಿದೆ. ಅಕಾಲಿಕ ಮಳೆ ಲಾಭದ ನಿರೀಕ್ಷೆಯಲ್ಲಿ ಇದ್ದ ರೈತನ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ.

ಹೌದು, ನಾವು ಈಗ ಹೇಳುತ್ತಿರುವುದು ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ವೆಂಕಟೇಶ್, ಮಂಜುಳಾ ಹೊಸಮನಿ ಎಂಬ ರೈತರು ಬೆಳೆದಿದ್ದ ಬೆಳೆಗಳು ಅಕಾಲಿಕ ಮಳೆಗೆ ನೆಲಕಚ್ಚಿವೆ. ನಾಲ್ಕು ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಪಪ್ಪಾಯ, ಬಾಳೆ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ.

ಸಾಲ ಮಾಡಿ ಮತ್ತೆ ಮನೆಯಲ್ಲಿ ಇದ್ದ ಬಂಗಾರವನ್ನು ಅಡವಿಟ್ಟು ಐದಾರು ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದು ಬಂಪರ್ ಲಾಭದ ನಿರೀಕ್ಷೆಯಲ್ಲಿ ಇದ್ದ ರೈತ ಕುಟುಂಬ ಈಗ ಕಂಗಾಲಾಗಿ ಕುಳಿತಿದೆ.

ವರದಿ: ಗೌರೀಶ ನಾಗಶೆಟ್ಟಿ, ಪಬ್ಲಿಕ್ ನೆಕ್ಸ್ಟ್ ಗದಗ

Edited By : Manjunath H D
PublicNext

PublicNext

20/03/2026 05:42 pm

Cinque Terre

9.78 K

Cinque Terre

0

ಸಂಬಂಧಿತ ಸುದ್ದಿ