ಶಿರಹಟ್ಟಿ: ತಾಲೂಕಿನ ಸುಗನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ದ್ವಾರದ ಬಳಿ ಇರುವ ಚರಂಡಿಯ ಮೇಲ್ಚಾವಣಿ (ಸಿಡಿ) ಕುರಿತು, ಅಪಾಯದಲ್ಲಿ ಶಾಲಾ ಮಕ್ಕಳ ಓಡಾಟ..! ಮಕ್ಕಳ ಬಲಿಗಾಗಿ ಮುಖ್ಯ ದ್ವಾರದ ಬಳಿ ಕಾದು ಕುಳಿತ ಗುಂಡಿ ಎಂಬ ಶೀರ್ಷಿಕೆ ಅಡಿಯಲ್ಲಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ನಲ್ಲಿ ಈ ಬಗ್ಗೆ ಕಳೆದ ಮಾ.11 ರಂದು ಬುಧವಾರ ವರದಿ ಪ್ರಸಾರ ಮಾಡಲಾಗಿತ್ತು.
ವರದಿಯನ್ನು ಗಮನಿಸಿದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕಿ ನಾಯಕ್ ಕಳೆದ ಬುಧವಾರ ಸುಗನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡುವ ಮೂಲಕ ಕುಸಿದು ಬಿದ್ದ ಸಿಡಿ ದುರಸ್ತಿಗೆ ಕ್ರಮ ಕೈಗೊಂಡಿದ್ದು ಈಗ ಚರಂಡಿಯ ಗುಂಡಿ ದುರಸ್ತಿಯಾಗಿದೆ.
ಒಟ್ಟಾರೆಯಾಗಿ ಈ ಸಿಡಿ ಕುಸಿದು ಬಿದ್ದು ಒಂದು ವರ್ಷ ಕಳೆದರೂ ಸಹ ಇಲ್ಲಿಯವರೆಗೂ ದುರಸ್ತಿ ಆಗಿರಲಿಲ್ಲ. ಈಗ ಪಬ್ಲಿಕ್ ನೆಕ್ಸ್ಟ್ ವರದಿಯ ಪರಿಣಾಮ ಚರಂಡಿಯ ಮೇಲ್ಚಾವಣಿ ದುರಸ್ತಿ ಭಾಗ್ಯವನ್ನು ಕಂಡಿದ್ದು ಎಂದು ಸುಗನಹಳ್ಳಿ ಗ್ರಾಮದ ಸಾರ್ವಜನಿಕರು ಹಾಗೂ ಪೋಷಕರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಗೌರೀಶ ನಾಗಶೆಟ್ಟಿ ಪಬ್ಲಿಕ್ ನೆಕ್ಸ್ಟ್ ಶಿರಹಟ್ಟಿ
PublicNext
12/03/2026 06:44 pm
LOADING...