ಗದಗ : ಸರಕಾರಿ ಪ್ರೌಢ ಶಾಲೆ ಯಲ್ಲಾಪುರ ದಲ್ಲಿ ಮಂಗಳವಾರ ಹತ್ತನೇ ತರಗತಿ ಮಕ್ಕಳಿಗೆ ಶುಭ ಕೋರುವುದರೊಂದಿಗೆ ಸರಸ್ವತಿ ಪುಜಾ ಸಮಾರಂಭವನ್ನು ಸಡಗರದಿಂದ ನಡೆಸಲಾಯಿತು.
ದಿನಾಂಕ 18-03-2026 ರಿಂದ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಗಳು ಪ್ರಾಂಭವಾಗುತ್ತಿದ್ದು ಭವಿಷ್ಯದ ಜೀವನ ಉತ್ತಮ ಗೊಳ್ಳುವಲ್ಲಿ ಹತ್ತನೇ ತರಗತಿ ಪಲಿತಾಂಶವೆ ಭದ್ರ ಬುನಾದಿಯಾಗಿರುವುದರಿಂದ ಉತ್ತಮ ಅಂಕಗಳನ್ನು ಪಡೆಯುವುದರ ಮೂಲಕ ಶೇಕಡಾ ನೂರು ಫಲಿತಾಂಶದೊಂದಿಗೆ ಶಾಲೆ, ತಾಲ್ಲೂಕ ಮತ್ತು ಜಿಲ್ಲೆಗೆ ಪ್ರಥಮ ಬರುವದೊಂದಿಗೆ ಯಲ್ಲಾಪುರ ಶಾಲೆಯ ಕೀರ್ತಿ ಬೆಳಗಲಿ ಎಂದು ಶಿವಾನಂದ ಅಸುಂಡಿ ದೊಡ್ಡೂರ ಕ್ಲಸ್ಟರ್ ಸಿ.ಆರ್.ಪಿ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದಿ ಶಿಕ್ಷಕರಾದ ಎಮ್. ಹೆಚ್.ದಿಂಡವಾಡ ಪ್ರಾಸ್ತಾವಿಕ ನುಡಿಗಳನ್ನು ಆಡುವುದರ ಮೂಲಕ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ತಿಳಿಸಿದರು.
ದೈಹಿಕ ಶಿಕ್ಷಕರಾದ ಎಸ್.ಸಿ.ಹಾವೇರಿ ಶಾಲಾ ವಾರ್ಷಿಕ ವರದಿಯನ್ನು ಓದುವದರೊಂದಿಗೆ ವರ್ಷದುದ್ದಕ್ಕೂ ನಡೆದ ಶಾಲಾ ಕಾರ್ಯಕ್ರಮಗಳ ವರದಿ ಮಂಡಿಸಿದರು.
ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರಾದ ಎಸ್. ಆಯ್.ಮುರಡಿ, ಪಿ.ಎಸ್.ಲಚ್ಚಾಣ, ಶ್ರೀಮತಿ ಎ.ಆಯ್.ಡಂಬಳ ರವರು ತಲಾ ಇಪ್ಪತ್ತೈದು ಸಾವಿರ ( 25000-00 ) ರೂಪಾಯಿಗಳನ್ನು ಶಾಲಾ ದತ್ತಿ ನಿಧಿಗೆ ದೇಣಿಗೆ ನೀಡಿ ಅದರಿಂದ ಬರುವ ಹಣದಲ್ಲಿ ಪ್ರತಿ ವರ್ಷ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ನೀಡಿ ಪ್ರೋತ್ಸಾಹಿಸಲು ತಿಳಿಸಿದರು.
ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು, ತಾಯಿಯೆ ಮೊದಲ ಗುರು, ಇದೆ ಸಂದರ್ಭದಲ್ಲಿ ಎಲ್ಲಾ ತಾಯಂದಿರಿಗೆ ಮಕ್ಕಳಿಂದ ಪಾದ ಪೂಜೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡು ತಾಯಿಗೆ ಗೌರವ ಕೊಡುವುದರ ಮೂಲಕ ಸಂಸ್ಕಾರ ಮೂಡಿಸುವ ಕಾರ್ಯ ಶ್ಲಾಘನೀಯ.
ಇದೆ ಸಂದರ್ಭದಲ್ಲಿ ಹತ್ತನೇ ತರಗತಿ ಮಕ್ಕಳು ಶಾಲೆಗೆ ಸ್ಟೀಲ್ ಟಾಕಿ, ತಾಮ್ರದ ಟಾಕಿ ಹಾಗೂ ಸೈರನ್ ದೇಣಗೆ ನೀಡಿದರು ಹಾಗೂ ಮೂರು ವರ್ಷಗಳ ಕಾಲ ಶಾಲೆಯಲ್ಲಿ ತಮ್ಮ ಮೇಲೆ ಪ್ರಭಾವ ಬೀರಿದ ಶಿಕ್ಷಕರನ್ನು ತಮ್ಮದೆ ನುಡಿಗಳಲ್ಲಿ ಹಾಡಿ ಹೊಗಳಿದರು, ಶಾಲೆಯನ್ನು ಬಿಟ್ಟು ಹೋಗುತ್ತೆವೆ ಎಂದು ಕಂಬನಿ ಮಿಡಿದರು.
Kshetra Samachara
11/03/2026 05:26 pm