ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಹಟ್ಟಿ: ನಿರ್ಮಾಣವಾದ ನಾಲ್ಕೈದು ವರ್ಷಗಳಲ್ಲಿ ಕುಸಿಯುತ್ತಿರುವ ಸೇತುವೆ

ಶಿರಹಟ್ಟಿ: ನಾಲ್ಕೈದು ವರ್ಷಗಳ ಹಿಂದೆ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಒಂದು ಕುಸಿಯುತ್ತಿರುವುದನ್ನು ನೋಡಿದರೆ, ಅಧಿಕಾರಿಗಳು ಹಾಗೂ ಗುತ್ತಿಗೆದಾರ ಸೇರಿಕೊಂಡು ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡಿದ ಹಾಗೆ ಕಾಣುತ್ತಿದೆ.

ಅರೆ ಇದೇನು ಹೇಳುತ್ತಿದ್ದಾರೆ ಅಂತೀರಾ ಹೌದು... ತಾಲೂಕಿನ ಮಾಗಡಿ ಗ್ರಾಮದಿಂದ ಹಿರೇಗುಂಜಳ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬರುವ ಹಳ್ಳಕ್ಕೆ ಅಡ್ಡಲಾಗಿ ನಾಲ್ಕೈದು ವರ್ಷಗಳ ಹಿಂದೆ ನಿರ್ಮಾಣವಾದ ಸೇತುವೆ ಈಗಾಗಲೇ ಕುಸಿಯುತ್ತಿದೆ. ಇದಕ್ಕೆ ಗುತ್ತಿಗೆದಾರರನ ಕಳಪೆ ಕಾಮಗಾರಿ ಹಾಗೂ ಅಧಿಕಾರಿಗಳ ಅವರ ಕೆಲಸಕ್ಕೆ ಸಾಥ್ ನೀಡಿರುವುದೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದರು.

ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನ ಮೇಲೆ ಶಿಸ್ತು ಕ್ರಮ, ಹಾಗೂ ಆದಷ್ಟು ಬೇಗನೆ ಈ ಸೇತುವೆಯನ್ನು ಸರಿಪಡಿಸದೆ ಹೋದರೆ ಉಗ್ರ ಹೋರಾಟ ಮಾಡುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದರು.

ಗೌರೀಶ ನಾಗಶೆಟ್ಟಿ ಪಬ್ಲಿಕ್ ನೆಕ್ಸ್ಟ್ ಶಿರಹಟ್ಟಿ

Edited By : Vinayak Patil
PublicNext

PublicNext

08/03/2026 05:17 pm

Cinque Terre

17.68 K

Cinque Terre

0

ಸಂಬಂಧಿತ ಸುದ್ದಿ