ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಹಟ್ಟಿ: ಬೆಂಕಿಯ ಅವಘಡ ಸಂಭವಿಸಿ ಹೊತ್ತಿ ಉರಿದ ಮೆಕ್ಕೆಜೋಳದ ಮೇವು

ಶಿರಹಟ್ಟಿ: ತಾಲೂಕಿನ ಸುಗ್ನಹಳ್ಳಿ ಗ್ರಾಮದ ಹೊರ ವಲಯದಲ್ಲಿ ಬೆಳ್ಳಟ್ಟಿ ರಸ್ತೆಯಲ್ಲಿರುವ ರಿ.ಸ.ನ 110/3 ಮಹೇಶ್ ಬಡ್ನಿ ಎಂಬುವರಿಗೆ ಸೇರಿದ ಜಮೀನಿನಲ್ಲಿನ ಅಂದಾಜು 10 ಟ್ರ್ಯಾಕ್ಟರಿನಷ್ಟು ಮೆಕ್ಕೆಜೋಳದ ಮೇವಿಗೆ ಹಾಗೂ ಮೆಕ್ಕೆಜೋಳದ ಬೆಂಡಿಗೆ (ಲಂಡಕಿ) ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಕಳೆದ ಮಾ.16 ರಂದು ಸೋಮವಾರ ರಾತ್ರಿ 10:00 ಗಂಟೆಗೆ ಸಂಭವಿಸಿದೆ.

ಮಹೇಶ್ ಬಡ್ನಿ ಇವರ ಜಮೀನಿನ ಪಕ್ಕದ ಜಮೀನಿನ ರೈತ ಶಿವಲಿಂಗಪ್ಪ ಬದಾಮಿ ಎಂಬುವರು ತಮ್ಮ ಜಮೀನಿಗೆ ನೀರು ಹರಿಸಲು ತಮ್ಮ ಕೊಳವೆ ಬಾವಿಯ ವಿದ್ಯುತ್ ಮೋಟಾರ್ ಚಾಲನೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ವಿದ್ಯುತ್ ಶಾರ್ಟ ಸರ್ಕಿಟ್ ಆಗಿ ಕೊಳವೆ ಬಾವಿಗೆ ಅಳವಡಿಸಿದ ಕೆಬಲ್ ಸುಟ್ಟು ಹೋದ ಪರಿಣಾಮ ಪಕ್ಕದಲ್ಲಿಯೇ ಇರುವ ಮೆಕ್ಕೆಜೋಳದ ಮೇವಿಗೆ ಬೆಂಕಿ ತಗುಲಿ ಹೊತ್ತಿ ಉರಿದಿದ್ದು ನಷ್ಟ ಉಂಟಾಗಿದೆ.

ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳೀಯ ನಾಗರಿಕರ ಸಹಾಯದೊಂದಿಗೆ ತಡರಾತ್ರಿ 1:30 ಗಂಟೆಯ ವರೆಗೂ ನಿರಂತರವಾಗಿ ಹರ ಸಾಹಸದಿಂದಾಗಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಶಿರಹಟ್ಟಿ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಗಳಾದ ಎಚ್.ವಿ.ಉದಯಕುಮಾರ,ಈರಪ್ಪ ಗೂಳಿ,ರಸೀದ್ ಮಸೂತಿ,ಶ್ರೀಧರ್ ಮಂಗಸೂಳಿ ಪಾಲ್ಗೊಂಡಿದ್ದರು.

ಗೌರೀಶ ನಾಗಶೆಟ್ಟಿ ಪಬ್ಲಿಕ್ ನೆಕ್ಸ್ಟ್ ಶಿರಹಟ್ಟಿ

Edited By : Shivu K
PublicNext

PublicNext

17/03/2026 09:49 pm

Cinque Terre

26.9 K

Cinque Terre

0