ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - ಕ್ಯಾಂಟರ್ ನಲ್ಲಿ ಅಕ್ರಮ ಗೋಸಾಗಾಣೆ - ಬಜರಂಗದಳ ಕಾರ್ಯಕರ್ತರಿಂದ ಜಪ್ತಿ

ಮುಳಬಾಗಿಲು - ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೈರಕ್ಕೂರು ಗ್ರಾಮದ ಬಳಿ ಹಸುಗಳನ್ನು ಖಸಾಯಿ ಖಾನೆಗೆ ಸಾಗಿಸಲಾಗುತ್ತಿದ್ದ ಕ್ಯಾಂಟರ್ ವಾಹನವನ್ನು ಭಜರಂಗದಳ ಕಾರ್ಯಕರ್ತರು ತಡೆದು ನಿಲ್ಲಿಸಿರುವ ಘಟನೆ ನಡೆದಿದೆ.

ಆಂಧ್ರಪ್ರದೇಶದ ಪುಂಗನೂರು ಭಾಗದಿಂದ ಮುಳಬಾಗಿಲು ಕಡೆಗೆ ತೆರಳುತ್ತಿದ್ದ ಕ್ಯಾಂಟರ್ ವಾಹನದಲ್ಲಿ ಸುಮಾರು 22 ಹಸುಗಳನ್ನು ತುಂಬಿಕೊಂಡು ಸಾಗಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಅನುಮಾನಗೊಂಡ ಭಜರಂಗದಳ ಕಾರ್ಯಕರ್ತರು ವಾಹನವನ್ನು ತಡೆದಾಗ ಕ್ಯಾಂಟರ್ ಚಾಲಕ ನಯಾಕ್ ಶರೀಪ್ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ವಾಹನವನ್ನು ಪರಿಶೀಲಿಸಿದ ವೇಳೆ ಕ್ಯಾಂಟರ್‌ನಲ್ಲಿ 22 ಹಸುಗಳನ್ನು ಇಕ್ಕಟ್ಟಿನ ಜಾಗದಲ್ಲಿ ತುಂಬಿಕೊಂಡು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಈ ಹಸುಗಳಲ್ಲಿ ಒಂದರ ಆರೋಗ್ಯ ಗಂಭೀರವಾಗಿದ್ದು ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆಯ ನಂತರ ಕ್ಯಾಂಟರ್ ವಾಹನ ಹಾಗೂ ಹಸುಗಳನ್ನು ಭಜರಂಗದಳ ಸಂಘಟನೆಯ ಮುಖಂಡರು ನಂಗಲಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : PublicNext Desk
Kshetra Samachara

Kshetra Samachara

12/03/2026 04:42 pm

Cinque Terre

240

Cinque Terre

0