ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ವೃದ್ಧೆ ಮನೆಗೆ ನುಗ್ಗಿ ಚಿನ್ನ ಕಳವು!

ಕೋಲಾರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ, ಒಂಟಿ ಮನೆಯಲ್ಲಿ ವಾಸವಿದ್ದ ವೃದ್ಧೆಯ ಮನೆಗೆ ನುಗ್ಗಿ, ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಮಾರ್ಚ್ 4ರಂದು, ಶ್ರೀನಿವಾಸಪುರ ತಾಲೂಕಿನ ಹೂಹಳ್ಳಿ ಗ್ರಾಮದ ನಿವಾಸಿ ರತ್ನಮ್ಮ ಎಂಬವರು, ಮನೆಯಲ್ಲಿ ಮಲಗಿರುವಾಗ ರಾತ್ರಿ ಬಾಗಿಲು ಹೊಡೆದು, ಮನೆ ಪ್ರವೇಶಿಸಿದ್ದ ಕಳ್ಳ ಚಾಕು ತೋರಿಸಿ, ಚಿನ್ನದ ಸರ ಹಾಗು ಓಲೆ ಕಸಿದು ಪರಾರಿಯಾಗಿದ್ದ, ಈ ಬಗ್ಗೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಪ್ರಕರಣ ತನಿಖೆ ಕೈಗೊಂಡಿದ್ದ ಪೊಲೀಸರು, ಇದೇ ಹೂಹಳ್ಳಿ ಗ್ರಾಮದ ಚೇತನ್ ಎಂಬ ಆರೋಪಿಯನ್ನು ಬಂಧಿಸಿದ್ದು, ಬಂಧಿತ ಕಳ್ಳನಿಂದ 5.50 ಲಕ್ಷ ಮೌಲ್ಯದ, 43 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಶ್ರೀನಿವಾಸಪುರ ಪೊಲೀಸರು ಮಾಹಿತಿ ನೀಡಿದ್ದಾರೆ.

Edited By : Nagaraj Tulugeri
PublicNext

PublicNext

21/03/2026 10:46 am

Cinque Terre

4.16 K

Cinque Terre

0

ಸಂಬಂಧಿತ ಸುದ್ದಿ