ಕೋಲಾರ : ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಬಸ್‌ಗಾಗಿ ಕಾಯ್ತಿದ್ದ ಮಹಿಳೆಯ ಸರ ಕದ್ದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನ ಬಂದಿಸುವಲ್ಲಿ, ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾರ್ಚ್ 14 ರಂದು ಮಾಲೂರು ತಾಲೂಕಿನ ರಾಧಮ್ಮ ಎಂಬುವರು ಪಡುವನಹಳ್ಳಿ ಗೇಟ್ ಬಳಿ ಬಸ್ ಗಾಗಿ ಕಾಯ್ತಿದ್ದಾಗ, ಬೈಕ್ ನಲ್ಲಿ ಬಂದಿದ್ದ ಇಬ್ಬರು, 30 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿದ್ದರು, ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಕೇವಲ ಮೂರು ದಿನದಲ್ಲೆ ಆರೋಪಿಗಳನ್ನ ಮಾಲೂರು ಪೊಲೀಸರು ಬಂದಿಸಿದ್ದಾರೆ, ಮಾಲೂರಿನ ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಮಾಲೂರು ಮೂಲದ ಆನಂದ್ ಹಾಗು ಏರ್ ಟೆಲ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಸುನಿಲ್ ಎಂಬಾತನನ್ನ ಪೊಲೀಸರು ಬಂದಿಸಿದ್ದು, ಬಂಧಿತರಿಂದ 32 ಗ್ರಾಂ ತೂಕದ ಸರ ಹಾಗು ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆಯಲಾಗಿದೆ, ಇನ್ನು ಸರ ಕದಿಯುವ ಮುನ್ನ ಇಬ್ಬರು ಕಳ್ಳರು, ಮಾಲೂರು ನಗರದ ವೈಟ್ ಗಾರ್ಡನ್ ಬಡಾವಣೆಯ ವಸಂತಮ್ಮ ಎಂಬುವರ ಮನೆಯ ಬೀಗ ಮುರಿದು, 60 ಸಾವಿರ ಕದ್ದಿರುವುದು ವಿಚಾರಣೆಯಲ್ಲಿ ತಿಳಿದುಬಂದಿದ್ದು, 20 ಸಾವಿರ ನಗದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
PublicNext
19/03/2026 11:13 am
LOADING...