ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಮಾಂಗಲ್ಯ ಕದ್ದವ ಅಂದರ್ - ಮಹಿಳೆಯ ಮುಖದಲ್ಲಿ ಸಂತಸ

ಕೋಲಾರ: ಮಾಲೂರು ತಾಲೂಕಿನಲ್ಲಿ ಮಹಿಳೆಯೊಬ್ಬರ ಮಾಂಗಲ್ಯ ಸರ ಕದ್ದಿದ್ದ ಆರೋಪಿಯನ್ನು ಮಾಲೂರು ಪೊಲೀಸರು ಬಂಧಿಸಿದ್ದು, ಕದ್ದಿದ್ದ ಬಂಗಾರವನ್ನು ವಶಪಡಿಸಿಕೊಂಡು ಮಾಲೀಕರಿಗೆ ಹಿಂದಿರುಗಿಸಿದ್ದಾರೆ.

ಜನವರಿ 10 ರಂದು ಮಾಲೂರು ತಾಲೂಕಿನ ತಗ್ಗಿಹೊಸಹಳ್ಳಿ ಗ್ರಾಮದಿಂದ ಗಂಗಾಪುರ ಗ್ರಾಮದ ಜಮೀನಿನ ಕಡೆಗೆ ವಾಯುವಿಹಾರಕ್ಕೆ ತೆರಳಿದ್ದ ಸೌಮ್ಯ ಎಂಬುವರು ಧರಿಸಿದ್ದ 20 ಗ್ರಾಂ ಮಾಂಗಲ್ಯ ಸರವನ್ನು ಕಳ್ಳತನ ಮಾಡಿ ಆರೋಪಿ ಪರಾರಿಯಾಗಿದ್ದ. ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ಪತ್ತೆ ಮತ್ತು ತಪ್ಪೊಪ್ಪಿಗೆ

ಪೊಲೀಸರು ತನಿಖೆ ನಡೆಸಿದಾಗ, ಆರೋಪಿ ಕಾರ್ತಿಕ್ ಎಂಬಾತ ಬೇರೊಂದು ಪ್ರಕರಣದಲ್ಲಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವುದು ಪತ್ತೆಯಾಯಿತು. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮಾಂಗಲ್ಯ ಸರ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರು ಮಹಿಳೆಯಿಂದ ಕದ್ದಿದ್ದ 3.40 ಲಕ್ಷ ರೂಪಾಯಿ ಮೌಲ್ಯದ, 20 ಗ್ರಾಂ ಬಂಗಾರದ ಸರವನ್ನು ವಶಪಡಿಸಿಕೊಂಡು, ಅದನ್ನು ಮಾಲೀಕರಿಗೆ ಯಶಸ್ವಿಯಾಗಿ ಹಿಂದಿರುಗಿಸಿದ್ದಾರೆ.

Edited By : Vijay Kumar
PublicNext

PublicNext

06/03/2026 11:07 pm

Cinque Terre

10.65 K

Cinque Terre

0