ಗುಂಡ್ಲುಪೇಟೆ: ಪರ್ಮಿಟ್ ಪಡೆಯದೆ ಅಕ್ರಮವಾಗಿ ಕೇರಳಕ್ಕೆ ಬಿಳಿಕಲ್ಲು ಸಾಗಿಸುತ್ತಿದ್ದ ಟಿಪ್ಪರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಂಡ ವಿಧಿಸಿದ ಘಟನೆ ಭಾನುವಾರ ನಡೆದಿದೆ.
ಗುಂಡ್ಲುಪೇಟೆ ಮಾರ್ಗವಾಗಿ ಅಕ್ರಮವಾಗಿ ಕೇರಳಕ್ಕೆ ಬಿಳಿ ಕಲ್ಲು ಸಾಗಿಸುತ್ತಿದ್ದ ಕೆಎಲ್ 29 ವೈ 1447 ನೋಂದಣಿಯ ಲಾರಿಯ ತಪಾಸಣೆ ನಡೆಸಿದ ಅಧಿಕಾರಿಗಳು ಪರ್ಮಿಟ್ ರಹಿತವಾಗಿ ಖನಿಜ ಸಂಪತ್ತನ್ನು ಅಕ್ರಮವಾಗಿ ಲೂಟಿ ಹೊಡೆಯುತ್ತಿದ್ದರೂ ಸಹ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮೌನವಹಿಸಿರುವುದಕ್ಕೆ ಸಾರ್ವಜನಿಕರು ರೈತ ಸಂಘ ಮುಖಂಡರು ಹಿಡಿಶಾಪ ಹಾಕುತ್ತಿದ್ದಾರೆ.
ಜನಸಾಮಾನ್ಯರಿಗೆ ರಸ್ತೆ ಸಂಚಾರ ನಿಯಮದ ಪಾಠ ಮಾಡುವ ಸಾರಿಗೆ ಇಲಾಖೆ ದೊಡ್ಡ ದೊಡ್ಡ ಟಿಪ್ಪರ್ ಗಳ ಸಹವಾಸಕ್ಕೆ ಹೋಗದಿರುವುದರ ಹಿಂದಿನ ಗುಟ್ಟೇನು ಎಂದು ಅನೇಕರು ಪ್ರಶ್ನಿಸುತ್ತಿದ್ದು ಕೆಲ ಅಧಿಕಾರಿಗಳ ಷಾಮೀಲಿನಿಂದ ಈ ರೀತಿಯಾದ ಅಕ್ರಮ ದಂಧೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಕೆಲವೇ ದಿನಗಳಲ್ಲಿ ಗಡಿ ಭಾಗದ ಜನರು ಬೊಗಸೆಯಷ್ಟು ಖನಿಜ ಸಂಪತ್ತಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಪ್ರಜ್ಞಾವಂತ ನಾಗರಿಕರು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಚುನಾವಣೆ ಅಭ್ಯರ್ಥಿ ಗುದ್ದಾಟದಲ್ಲಿ ತಲ್ಲೀಣರಾಗಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಇಲಾಖೆಯಲ್ಲಿನ ಕಡತಗಳ ವಿಲೇವಾರಿ ಮಾಡುವುದನ್ನು ಬಿಟ್ಟು ಅಕ್ರಮಕ್ಕೆ ಅಂಕುಶ ಹಾಕುವ ಕೆಲಸ ಮಾಡಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Kshetra Samachara
09/03/2026 08:29 pm
LOADING...