ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಗಾಂಜಾ ಮಾರುತ್ತಿದ್ದವ ಅಂದರ್!

ಕೋಲಾರ: ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಪಾರ್ಕ್ ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಮುಳಬಾಗಿಲು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ, ಮುಳಬಾಗಿಲು ನಗರದ ಸೋಮೇಶ್ವರ ಪಾಳ್ಯದ ಪಾರ್ಕ್ ಬಳಿ, ಶಾಮೀರ್ ಪಾಷಾ ಎಂಬಾತ ಬ್ಯಾಗ್‌ನಲ್ಲಿ ಗಾಂಜಾ ಇರಿಸಿಕೊಂಡು ಮಾರಾಟ ಮಾಡಲು ಪ್ರಯತ್ನಿಸಿದ್ದಾನೆ.

ಪೊಲೀಸರು ಆರೋಪಿಯನ್ನ ಬಂಧಿಸಿ ಪರಿಶೀಲನೆ ಮಾಡಿದಾಗ, ಗಾಂಜಾ ಪತ್ತೆಯಾಗಿದೆ, ಬಂಧಿತ ಆರೋಪಿ ಶಾಮೀರ್ ಪಾಷಾನಿಂದ 50 ಸಾವಿರ ಮೌಲ್ಯದ 1 ಕೆಜಿ. 150 ಗ್ರಾಂ ತೂಕದ ಒಣ ಗಾಂಜಾ ಪತ್ತೆಯಾಗಿದ್ದು, ಆರೋಪಿಯ ವಿರುದ್ಧ ಮುಳಬಾಗಿಲು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

19/03/2026 11:18 am

Cinque Terre

200

Cinque Terre

0