ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಬ್ಲಿಕ್ ನೆಕ್ಸ್ಟ್ ಫಲಶ್ರುತಿ : ಗಡಿ ಗ್ರಾಮ ಹನುಮನಗುಡ್ಡದಲ್ಲಿ ನೀರಿನ ಸಮಸ್ಯೆ ಇತ್ಯರ್ಥ

ಮೊಳಕಾಲ್ಮೂರು ತಾಲೂಕಿನ ಗಡಿ ಗ್ರಾಮದಲ್ಲಿ ಉಂಟಾಗಿದ್ದ ಕುಡಿಯುವ ನೀರಿನ ಸಮಸ್ಯೆಯನ್ನು ಕುರಿತು ಪಬ್ಲಿಕ್ ನೆಕ್ಸ್ಟ್ ನಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು . ಸುದ್ದಿ ಪ್ರಸಾರದ ನಂತರ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾರೆ.

ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸಿದ ನಂತರ ಶಾಸಕ ಎನ್ ವೈ ಗೋಪಾಲಕೃಷ್ಣ ತಕ್ಷಣವೇ ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿನ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದ ಗ್ರಾಮಸ್ಥರ ಅಳಲನ್ನು ಗಮನಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಧಿಕಾರಿಗಳು ಭೇಟಿ ನೀಡಿದ ವೇಳೆ ಸ್ಥಳದಲ್ಲಿದ್ದ ಮಹಿಳೆಯರು ಹಾಗೂ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಮಾಧ್ಯಮಗಳಲ್ಲಿ ಸುದ್ದಿಯಾದ ನಂತರ ಗ್ರಾಮಕ್ಕೆ ಬಂದಿದ್ದೀರಾ ನಮ್ಮ ಸಮಸ್ಯೆ ಈಗ ತಿಳೀತಾ ಅಂತಾ ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ತಾಲೂಕು ಪಂಚಾಯ್ತಿ ಇಓ ಹನುಮಂತಪ್ಪ ಜನರನ್ನು ಸಮಾಧಾನ ಪಡಿಸಿ ಇನ್ಮೇಲೆ ಈ ರೀತಿ ಸಮಸ್ಯೆ ಆಗದಂತೆ ನೋಡಿಕೊಳ್ತೀವಿ ಎಂದು ಜನರಿಗೆ ಭರವಸೆ ನೀಡಿದ್ರು.

ಪರಿಶೀಲನೆಯ ಬಳಿಕ ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಂಡು ನೀರಿನ ಸರಬರಾಜು ವ್ಯವಸ್ಥೆಯನ್ನು ಸರಿಪಡಿಸಿ, ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸುವಂತೆ ವ್ಯವಸ್ಥೆ ಮಾಡಿದರು. ಸುಟ್ಟು ಹೋದ ಮೋಟಾರ್ ಪಂಪ್ ಗಳನ್ನು ಬದಲಾಯಿಸಿ ಹೊಸ ಮೋಟಾರ್ ಪಂಪ್ ಅಳವಡಿಸಿ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ. ಜೆಜೆಎಂ ಯೋಜನೆಯಲ್ಲಿ ಮನೆ ಮನೆಗೆ ನೀರು ಸಂಪರ್ಕಿಸುವ ಯೋಜನೆಯಲ್ಲಿ ನೀರು ಹರಿಸಲಾಗಿದೆ.ಗ್ರಾಮದ ಮಿನಿ ಟ್ಯಾಂಕರ್ ಗಳಿಗೆ ನೀರು ಬಿಟ್ಟಿದ್ದು ಸದ್ಯಕ್ಕೆ ನೀರಿನ ಕೊರತೆ ನೀಗಿದೆ.ಅಷ್ಟೇ ಅಲ್ಲದೇ ಗ್ರಾಮದ ಎಲ್ಲ ಚರಂಡಿಗಳನ್ನು ಸ್ವಚ್ಚತೆ ಮಾಡಿದ್ದು ಬೀದಿ ದೀಪ ಸೇರಿದಂತೆ ಮೂಲಭೂತ ಸೌಕರ್ಯಗಳನ್ನೂ ಒದಗಿಸಲು ಮುಂದಾಗಿದ್ದಾರೆ.

-ಹೆಚ್ ಮಹಾಂತೇಶ್ ರಾಯಪುರ ಪಬ್ಲಿಕ್ ನೆಕ್ಸ್ಟ್ ಮೊಳಕಾಲ್ಮೂರು

Edited By : Shivu K
PublicNext

PublicNext

12/03/2026 10:01 pm

Cinque Terre

12.66 K

Cinque Terre

0

ಸಂಬಂಧಿತ ಸುದ್ದಿ