ಚಿತ್ರದುರ್ಗ: ಜಿಲ್ಲಾ ಆಸ್ಪತ್ರೆಯ ಎಮರ್ಜೆನ್ಸಿಯಲ್ಲಿ ರೋಗಿಗಳ ಪರದಾಟ... ಮಾತ್ರೆ ಇಲ್ಲ, ಇಂಜೆಕ್ಷನ್ ಇಲ್ಲ, ನಾವು ರೋಗಿಗಳಿಗೆ ಎಮರ್ಜೆನ್ಸಿ ಚಿಕಿತ್ಸೆ ಕೊಡೋದು ಹೇಗೆ...? ನಮಗೆ ಸಾಕಷ್ಟು ಮೆಡಿಸಿನ್ ಕೊಡಿ ಅಂತಾ ಪತ್ರ ಬರೆದಿರುವ ವೈದ್ಯಾಧಿಕಾರಿಗಳು.
ಈ ದೃಶ್ಯಗಳು ಕಂಡಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆ ಎಮರ್ಜೆನ್ಸಿ ವಾರ್ಡ್ ನಲ್ಲಿ. ಕಳೆದ ಒಂದು ವಾರದಿಂದ ಎಮರ್ಜೆನ್ಸಿ ಚಿಕಿತ್ಸೆ ಅಂತಾ ಬರುವ ರೋಗಿಗಳಿಗೆ ಔಷಧಿ ಸಿಗ್ತಿಲ್ಲ. ಇದರಿಂದ ಬಡ ರೋಗಿಗಳಿಗೆ ತೊಂದರೆಯಾಗ್ತಿದೆ. ಔಷಧಿಗಳ ಕೊರತೆಯಿಂದ ರೋಗಿಗಳಿಗೆ ಹೆಚ್ಚು ಕಮ್ಮಿ ಆದ್ರೆ ನಾವು ಜವಾಬ್ದಾರಿ ಅಲ್ಲಾ ಎಂದು ತುರ್ತು ಚಿಕಿತ್ಸಾ ವಿಭಾಗದ ವೈದ್ಯಾಧಿಕಾರಿಗಳೇ ಜಿಲ್ಲಾ ಸರ್ಜನ್ ಡಾ. ರವೀಂದ್ರ ಅವರಿಗೆ ಪತ್ರ ಬರೆದಿದ್ದಾರೆ.
ವೈದ್ಯರು ಬರೆದ ಪತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹೀಗೇ ಆದ್ರೆ ಜಿಲ್ಲಾಸ್ಪತ್ರೆಯನ್ನೇ ನಂಬಿ ಚಿಕಿತ್ಸೆಗೆ ಬರುವ ರೋಗಿಗಳ ಪರಿಸ್ಥಿತಿ ಏನು ಎನ್ನು ವ ಪ್ರಶ್ನೆ ಉದ್ಭವವಾಗಿದೆ. ಎಲ್ಲವೂ ಸರಿಯಿದೆ ಎಂದು ಹೇಳೋ ಸರ್ಕಾರ, ಜಿಲ್ಲಾಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಇದೆಯೋ ಇಲ್ಲವೋ ಎಂಬ ಬಗ್ಗೆಯೂ ಗಮನ ಹರಿಸಿ ಸಮರ್ಪಕ ಔಷಧಿ ಸರಬರಾಜಿಗೆ ಕ್ರಮ ಜರುಗಿಸಬೇಕು.
ಇನ್ನೂ ಗ್ರಾಮೀಣ ಭಾಗದಲ್ಲಿ PHC,CHC ಆಸ್ಪತ್ರೆಗಳು ಇರ್ತವೆ. ಆದ್ರೇ ಅಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲಾ ಔಷಧಿಗಳು ಸಿಗೋಲ್ಲ ಅಂತ ಜನರು ಜಿಲ್ಲಾ ಕೇಂದ್ರದ ಸರ್ಕಾರಿ ಜಿಲ್ಲಾಸ್ಪತ್ರೆಗೆ ಬರ್ತಾರೆ. ಆದರೇ ಇಲ್ಲಿಯೂ ಅದೇ ಪಾಡು ಅನ್ನೋದಾದ್ರೆ ಬಡವರ ಆರೋಗ್ಯಕ್ಕೆ ರಕ್ಷಣೆ ಯಾರು ಎಂಬ ಚಿಂತೆ ಜನರದ್ದು. ಈ ಕುರಿತು
ಸ್ವತಃ ಆರೋಗ್ಯ ಸಚಿವರೇ ಔಷಧಿ ಕೊರತೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಖಾಲಿಯಾದ ಔಷಧಿ ಖರೀದಿಗೆ ಆಸ್ಪತ್ರೆಯ ಹಂತದಲ್ಲೇ ಖರೀದಿಗೆ ಹಣಕಾಸನ್ನು ಕೂಡ ನೀಡಲಾಗಿದೆ.
ಔಷಧಿ ಕೊರತೆ ನೀಗಿಸಲು ಸಮಯಕ್ಕೆ ಸರಿಯಾಗಿ ಟೆಂಡರ್ ಪ್ರೊಸೆಸ್ ಕೂಡ ಮಾಡಲಾಗ್ತಿದ್ದು, IAS, KAS ಅಧಿಕಾರಿಗಳನ್ನು ನೇಮಕ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗ್ತಿದೆ. ಎಮರ್ಜೆನ್ಸಿ ಗಳಿಗೆ ಜಿಲ್ಲಾ ಸರ್ಜನ್ ಅವರೇ ಔಷಧಿ ತರಿಸಿಕೊಡಲು ಅವಕಾಶ ಇದೆ. ಔಷಧಿ ಖರೀದಿಸಲು ಸಮಸ್ಯೆ ಇಲ್ಲ ಎಂದಿದ್ದಾರೆ.
ಒಟ್ಟಾರೆ, ಸರ್ಕಾರಿ ಔಷಧಿ ಕೊರತೆ ನೀಗಿಸಲು ಜಿಲ್ಲಾಸ್ಪತ್ರೆಯ ಹಂತದಲ್ಲೇ ಹಣ ನೀಡಿದ್ದೇ ಆದ್ರೆ, ಜಿಲ್ಲಾ ಸರ್ಜನ್ ಡಾ. ರವೀಂದ್ರ ಕೂಡಲೇ ಸಮಸ್ಯೆ ಪರಿಹಾರ ಮಾಡಲಿ. ಕೂಡಲೇ ಔಷಧಿ ಖರೀದಿ ಮಾಡಿ, ರೋಗಿಗಳಿಗೆ ತೊಂದರೆ ಆಗದಂತೆ ಕ್ರಮ ವಹಿಸಬೇಕಿದೆ.
PublicNext
19/03/2026 03:04 pm