ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಸಿಲಿಂಡರ್ ಗ್ಯಾಸ್ ಗೆ ಮುಗಿಬಿದ್ದ ಜನತೆ

ಬಾಗಲಕೋಟೆ: ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧದ ಪ್ರಖರತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಭಾರತದ ವಿವಿಧ ವಲಯಗಳ ಮೇಲೆ ಅದರ ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಈ ಆತಂಕದ ನಡುವೆ, ಗ್ಯಾಸ್ ಅಭಾವ ಎದುರಾಗಬಹುದು ಎಂಬ ಭೀತಿಯಿಂದ ರಬಕವಿ ತಾಲೂಕು ನಗರದಲ್ಲಿರುವ ಭಾರತಗ್ಯಾಸ್ ಏಜೆನ್ಸಿಯ ಮುಂದೆ ಸಿಲಿಂಡರ್ ಗ್ಯಾಸ್ ಪಡೆಯಲು ಜನರು ಮುಗಿಬಿದ್ದ ದೃಶ್ಯಗಳು ಕಂಡುಬಂದವು.

ಸಿಲಿಂಡರ್‌ಗಾಗಿ ಸರತಿ ಸಾಲು

ಗ್ಯಾಸ್ ಕೊರತೆಯ ಭೀತಿಯಿಂದಾಗಿ ರಬಕವಿ ನಗರದಲ್ಲಿರುವ ಭಾರತಗ್ಯಾಸ್ ಏಜೆನ್ಸಿಯ ಮುಂದೆ ಸಿಲಿಂಡರ್ ಗ್ಯಾಸ್ ಪಡೆಯಲು ಜನರು ಮುಗಿಬಿದ್ದ ದೃಶ್ಯಗಳು ಕಂಡುಬಂದವು. ತಲೆ ಸುಡುವ ಬಿಸಿಲಿನ ನಡುವೆಯೂ ಭಾರತಗ್ಯಾಸ್ ಅಂಗಡಿಯ ಮುಂದೆ ಜನರು ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಗ್ಯಾಸ್ ಪಡೆದುಕೊಳ್ಳುತ್ತಿದ್ದರು. ಕಳೆದ ವಾರ ಹೆಸರು ನೋಂದಾಯಿಸಿದರೂ ಸಹ ಗ್ಯಾಸ್ ಸಿಗುತ್ತಿಲ್ಲ ಎಂದು ಹಲವರು ಅಳಲು ತೋಡಿಕೊಂಡರು. ಅಂಗಡಿ ಮುಂಭಾಗದ ಬಯಲು ರಸ್ತೆಯಲ್ಲಿ ಖಾಲಿ ಸಿಲಿಂಡರ್‌ಗಳನ್ನು ಹೊತ್ತ ಅನೇಕ ಬೈಕ್‌ಗಳು ಸಾಲುಗಟ್ಟಿ ನಿಂತಿದ್ದವು.

ಕೊರತೆಯಿಲ್ಲ ಎಂದ ಸಿಬ್ಬಂದಿ

ಆದಾಗ್ಯೂ, ಗೃಹೋಪಯೋಗಿ ಸಿಲಿಂಡರ್ ಗ್ಯಾಸ್‌ಗೆ ಯಾವುದೇ ಕೊರತೆಯಿಲ್ಲ ಎಂದು ಭಾರತಗ್ಯಾಸ್ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ.

Edited By : Vinayak Patil
PublicNext

PublicNext

13/03/2026 04:53 pm

Cinque Terre

12.61 K

Cinque Terre

0

ಸಂಬಂಧಿತ ಸುದ್ದಿ