ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ : ಲೋಕ ಅದಾಲತ್ ನಲ್ಲಿ ಒಂದಾದ ದಂಪತಿ

ಚಾಮರಾಜನಗರ : ಕ್ಷುಲ್ಲಕ ಕಾರಣಗಳಿಂದ ವಿವಾಹ ವಿಚ್ಚೇದನ ಹಾಗೂ ಜೀವನಾಂಶಕ್ಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಹಲವು ವರ್ಷಗಳಿಂದ ದೂರವಿದ್ದ ಹಲವು ದಂಪತಿ ಚಾಮರಾಜನಗರದ ಜಿಲ್ಲಾ ನ್ಯಾಯಾಲದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಮತ್ತೆ ಒಂದಾಗಿ ನೂತನ ಜೀವನ‌ಕ್ಕೆ ಕಾಲಿಟ್ಟರು.

ಚಾಮರಾಜನಗರದ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಚಾಮರಾಜನಗರ ತಾಲೂಕಿನ ಕಿರಣ್ ಕುಮಾರ್ ಹಾಗೂ ಲತಾಭಾಯಿ ದಂಪತಿ ಕ್ಷುಲ್ಲಕ ಕಾರಣಕ್ಕೆ 2025ರಲ್ಲಿ ವಿಚ್ಛೇದನ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. 1 ವರ್ಷದಿಂದ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು. ದೂರವಾಗಿದ್ದ ದಂಪತಿ ಸ್ಥಿತಿಯನ್ನು ಗಮನಿಸಿದ ಅರ್ಜಿದಾರರ ಪರ ವಕೀಲರು ದಂಪತಿಯ ಉತ್ತಮ ಭವಿಷ್ಯಕ್ಕಾಗಿ ಇಬ್ಬರು ಒಂದಾಗುವಂತೆ ಮನವೊಲಿಸಿದ ಕಾರಣ ಆ ದಂಪತಿ ಲೋಕ ಅದಾಲತ್‌ ನಲ್ಲಿ ಪರಸ್ಪರ ಒಪ್ಪಿಗೆ ಸೂಚಿಸಿದರು.

ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಆಡಳಿತಾತ್ಮಕ ನ್ಯಾಯಾಧೀಶರಾದ ಡಾ.ಕೆ.ಮನ್ಮಧರಾವ್,ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಪ್ರಭಾವತಿ ಅವರ ಸಮ್ಮುಖದಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸಿಕೊಂಡು, ಒಬ್ಬರಿಗೊಬ್ಬರು ಹಾರ ಬದಲಾಯಿಸಿಕೊಂಡು, ಸಿಹಿ ತಿನಿಸುವ ಮೂಲಕ ಮತ್ತೆ ಒಂದಾದರು.

ಇದೇ ರೀತಿ ವಿಚ್ಚೇದನ ಹಾಗೂ ಜೀವನಾಂಶಕೋರಿ ಅರ್ಜಿ ಅರ್ಜಿ ಸಲ್ಲಿಸಿದ್ದ ದಂಪತಿಗಳು ರಾಜೀ ಸಂದಾನದ ಮೂಲಕ ಮತ್ತೆ ಒಂದಾದರು. ಅಲ್ಲದೆ ಹಲವು ದಿನಗಳಿಂದಲೂ ಗಿರಿಜನ ಮಕ್ಕಳಿಗೆ ನೀಡಲು ಸಾಧ್ಯವಾಗದಿದ್ದ ಜನನ ಪ್ರಮಾಣ ಪತ್ರವನ್ನು ಲೋಕ ಅದಾಲತ್ ನಲ್ಲಿ ನೀಡಲಾಯಿತು.

 

Edited By : PublicNext Desk
Kshetra Samachara

Kshetra Samachara

14/03/2026 03:49 pm

Cinque Terre

820

Cinque Terre

0

ಸಂಬಂಧಿತ ಸುದ್ದಿ