ಗುಂಡ್ಲುಪೇಟೆ : ಗಡಿಭಾಗದಲ್ಲಿ ಮತ್ತೆ ಕೇರಳ ಟಿಪ್ಪರ್‌ಗಳ ದರ್ಬಾರ್ ಜೋರಾಗಿಯೇ ನಡೆಯುತ್ತಿದೆ ಶಾಲಾ ಮಕ್ಕಳಿಗೆ ಜವರಾಯನ ದರ್ಶನ ಮಾಡಿಸಿದ ಘಟನೆ ನಡೆದ ಒಂದೇ ದಿನದ ಅಂತರದಲ್ಲಿಯೇ ಇಡೀ ಜಿಲ್ಲಾಡಳಿತ ವ್ಯವಸ್ಥೆಗೆ ಸೆಡ್ಡು ಹೊಡೆದಿರುವ ಕೇರಳ ಉದ್ಯಮಿಗಳು ಮತ್ತದೇ ದಂಧೆಯನ್ನ ನಿರ್ವಿಘ್ನವಾಗಿ ಮುಂದುವರಿಸುತ್ತಿರುವುದು ಅಧಿಕಾರಿಗಳ ಕಾರ್ಯವೈಖರಿಯನ್ನ ಬಟಾಬಯಲು ಮಾಡುತ್ತಿದೆ.
ಮಂಗಳವಾರ ತಾಲ್ಲೂಕಿನ ಚಿಕ್ಕತುಪ್ಪೂರು ಗೇಟ್ ಸಮೀಪ ಶಾಲಾ ಮಕ್ಕಳು ತೆರಳುತ್ತಿದ್ದ ಮಿನಿ ವಾಹನಕ್ಕೆ ಟಿಪ್ಪರ್ ಗುದ್ದಿದ ಪರಿಣಾಮ ಕೈ ಕಾಲು ಮುರಿತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದ ಮಕ್ಕಳ ಪರಿತಾಪ ಮಾಸುವ ಮುಂಚೆಯೇ ಪುನಃ ಲೂಟಿಗೆ ಮುಂದಾಗಿರುವ ಕೇರಳ ಉದ್ಯಮಿಗಳು ರೈತ ಸಂಘ, ವಕೀಲರು ಮತ್ತು ಶಿಂಡನಪುರ ಗ್ರಾಮಸ್ಥರು ನಡೆಸಿದ ಪ್ರತಿಭಟನೆಗೆ ಸೆಡ್ಡು ಹೊಡೆದು ಗುರುವಾರ ಬೆಳ್ಳಂಬೆಳಗ್ಗೆ ಬಿಳಿಕಲ್ಲು , ಎಂಸ್ಯಾನ್ಡ್ ಸಾಗಿಸಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಮಾರ್ಚ್ 17 ರಂದು ಚಿಕ್ಕತುಪ್ಪೂರು ಗೇಟ್ ಸಮೀಪ ಸಂಭವಿಸಿದ ಭೀಕರ ದುರಂತದಲ್ಲಿ ಶಿಂಡನಪುರ, ಕಂದೇಗಾಲ ಹಾಗೂ ಕೊಡಸೋಗೆ ಗ್ರಾಮದ ವಿದ್ಯಾರ್ಥಿಗಳು ತೀವ್ರತರವಾದ ಪೆಟ್ಟಿಗೊಳಗಾಗಿದ್ದು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ, ಓವರ್ ಲೋಡ್, ಅನುಮತಿರಹಿತವಾಗಿ ಸಂಚರಿಸುವ ಟಿಪ್ಪರ್‌ಗಳ ವಿರುದ್ಧ ರೊಚ್ಚಿಗೆದ್ದಿದ್ದ ರೈತ ಸಂಘ, ವಕೀಲರು ಹಾಗೂ ಪೋಷಕರು ಭಾರಿ ಪ್ರತಿಭಟನೆ ನಡೆಸಿದ್ದರೂ ಸಹ ಯಾವುದೇ ಉಪಯೋಗಕ್ಕೆ ಬಾರದು ಎಂಬ ಸತ್ಯ ಹೊರಬಿದ್ದಿದೆ. ಘಟನೆ ಬಳಿಕ ಕೇವಲ ಸ್ಥಳೀಯ ಮಾಲೀಕತ್ವದ ಟಿಪ್ಪರ್‌ಗಳು ಸದ್ದುನಿಲ್ಲಿಸಿವೆಯೇ ಹೊರತು ಕೇರಳ ಟಿಪ್ಪರ್‌ಗಳಲ್ಲ ಇದಕ್ಕೆ ಪುಷ್ಟಿ ನೀಡುವಂತೆ ಮಂಗಳವಾರ ಬೆಳಗ್ಗೆ 6 ರ ವೇಳೆ ಹತ್ತಾರು ಟಿಪ್ಪರ್‌ಗಳು ಗಡಿ ದಾಟುತ್ತಿರುವ ದೃಶ್ಯ ಲಭ್ಯವಾಗಿದ್ದು ಸಾರ್ವಜನಿಕರ ಹಿತಾಸಕ್ತಿಗಿಂತ ಕೇರಳ ಉದ್ಯಮಿಗಳ ಜತೆಗಿನ ಒಡನಾಟವೇ ಮುಖ್ಯ ಎಂಬಂತೆ ಅಕ್ರಮ ಸಾಗಣೆಗೆ ಅನುಮತಿ ನೀಡಿದ್ದಾದರೂ ಯಾಕೆ ಎಂದು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತವನ್ನ ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ.
PublicNext
21/03/2026 03:49 pm
LOADING...