ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತರಿಗೆ ಭಯಹುಟ್ಟಿಸಿದ್ದ ಚಾಲಾಕಿ ಚಿರತೆ ಕೊನೆಗೂ ಸೆರೆ - ರೈತರು ನಿರಾಳ

ಚಾಮರಾಜನಗರ : ತಾಲೂಕಿನ ಬೇಡರಪುರ ಸಮೀಪ ಹಲವು ದಿನಗಳಿಂದ ನಾಯಿಗಳು ಸೇರಿದಂತೆ ಇತರೆ ಜಾನುವಾರುಗಳ ಮೇಲೆ ದಾಳಿ ಮಾಡಿ ರೈತರಲ್ಲಿ ಭಯ ಮೂಡಿಸಿದ್ದ ಚಾಲಾಕಿ ಚಿರತೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆ ಹಿಡಿದಿದೆ. 

ಬೇಡರಪುರ, ಕಾಳನಹುಂಡಿ ಸುತ್ತಮುತ್ತಲು ಸಾಕುನಾಯಿಗಳು ಹಾಗೂ ಜಾನುವಾರುಗಳ ಮೇಲೆ ಚಿರತೆ ದಾಳಿ ಮಾಡುತ್ತಿತ್ತು. ಇದರಿಂದ ಭಯಭೀತರಾಗಿದ್ದ ಚಿರತೆಯ ಸೆರೆಗೆ ಬೋನ್ ಇಡುವಂತೆ ಸ್ಥಳೀಯ ರೈತ ಮುಖಂಡರು ಮನವಿ ಮಾಡಿದ್ದರು. ಗ್ರಾನಸ್ಥರ ಮನವಿಗೆ ಸ್ಪಂಧಿಸಿದ  ಅರಣ್ಯ ಸಿಬ್ಬಂದಿ ಬೋನ್ ಅಳವಡಿಸಿದರು.

ಎಂದಿನಂತೆ ಆಹಾರ ಹರಸಿ ಬಂದ ಚಿರತೆ ಬೋನಿನೊಳಗೆ ನುಗ್ಗಿ ಸೆರೆಯಾಗಿದೆ. ಕೊನೆಗೂ ಚಿರತೆ ಸೆರೆಯಾಗಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ರೈತರು ನಿಟ್ಟುಸಿರು ಬಿಡುವಂತಾಗಿದೆ.

Edited By : PublicNext Desk
Kshetra Samachara

Kshetra Samachara

20/03/2026 10:21 am

Cinque Terre

1.06 K

Cinque Terre

0

ಸಂಬಂಧಿತ ಸುದ್ದಿ