ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಿಲ್ಲೆಯ ವಿವಿಧೆಡೆ ಆಲಿಕಲ್ಲು ಸಹಿತ ಬಾರಿ ಮಳೆ

ಚಾಮರಾಜನಗರ : ಜಿಲ್ಲೆಯ ವಿವಿಧೆಡೆ  ಮಂಗಳವಾರ ಮಧ್ಯಾಹ್ನ ಗುಡುಗು, ಆಲಿಕಲ್ಲು ಸಹಿತ ಬಾರಿ ಮಳೆ ಸುರಿದು ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಭುವಿಗೆ ತಂಪರೆಯಿತು.

ಮಂಗಳವಾರ ಮಧ್ಯಾಹ್ನ ‌ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಆರಂಭಗೊಂಡ ಮಳೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಇದರಿಂದ ಕೆಲ ಕಾಲ ಜನ ಜೀವನ‌ ಅಸ್ತವ್ಯಸ್ಥಗೊಂಡಿತು. 

ವರ್ಷದ ಮೊದಲ ಮಳೆಯನ್ನು ಕಂಡು ಜನರು ಸಂಭ್ರಮಿಸಿದರೆ, ಮತ್ತೊಂದೆಡೆ ಗುಡುಗು ಸಿಡಿಲಿನ ಆರ್ಭಟಕ್ಕೆ ಬೆಚ್ಚಿ ಬೀಳುವಂತಾಯಿತು. ಆಲಿಕಲ್ಲು ಸಹಿತ ಬಾರಿ ಮಳೆಗೆ ಮಾವುಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲೂಕಿನ ಸಂತೇಮರಹಳ್ಳಿಯಲ್ಲಿ ಸುರಿದ ಆಲಿಕಲ್ಲು ಸಹಿತ ಮಳೆಯಿಂದ ರಸ್ತೆಯ ಎರಡು ಬದಿ ನೀರು ಹರಿಯುವ ಸ್ಥಳದಲ್ಲಿ ಆಲಿಕಲ್ಲಿ ರಾಶಿಕಂಡು ಬಂತು. ಜನರು ರಸ್ತೆ ಬದಿ ಇದ್ದ ಆಲಿಕಲ್ಲುಗಳನ್ನು ಎತ್ತಿಕೊಂಡು ಸಂಭ್ರಮಿಸಿದರು.

Edited By : PublicNext Desk
Kshetra Samachara

Kshetra Samachara

17/03/2026 05:28 pm

Cinque Terre

340

Cinque Terre

0

ಸಂಬಂಧಿತ ಸುದ್ದಿ