ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿಯಲ್ಲಿ ಆಟೋ ಎಲ್‌ಪಿಜಿ ಅಭಾವ: ಚಾಲಕರ ಆಕ್ರಂದನ!

ಬಳ್ಳಾರಿ: ಬಳ್ಳಾರಿ ನಗರದಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಕೊರತೆಯ ಬಳಿಕ ಇದೀಗ ಆಟೋಗಳಿಗೆ ಬಳಸುವ ಎಲ್‌ಪಿಜಿ ಗ್ಯಾಸ್‌ಗೂ ತೀವ್ರ ಅಭಾವ ಎದುರಾಗಿದೆ. ನಿಗದಿತ ಪ್ರಮಾಣದಲ್ಲಿ ಸ್ಟಾಕ್ ಪೂರೈಕೆಯಾಗದ ಹಿನ್ನೆಲೆಯಲ್ಲಿ ಈ ಕೊರತೆ ಉಂಟಾಗಿದೆ.

ಚಾಲಕರ ನಿರಾಶೆ, ಸರತಿ ಸಾಲು

ನಗರದ ಆರು ಆಟೋ ಎಲ್‌ಪಿಜಿ ಗ್ಯಾಸ್ ಕೇಂದ್ರಗಳಲ್ಲಿ ಸ್ಟಾಕ್ ಸಂಪೂರ್ಣ ಖಾಲಿಯಾಗಿದ್ದು, ಗ್ಯಾಸ್ ಸಿಗದೆ ಆಟೋ ಚಾಲಕರು ನಿರಾಶರಾಗಿ ವಾಪಸ್ಸು ತೆರಳುತ್ತಿದ್ದಾರೆ. ಗ್ಯಾಸ್ ದೊರೆಯುವ ನಿರೀಕ್ಷೆಯಲ್ಲಿ ಹಲವು ಚಾಲಕರು ಬಂಕ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ದರ ಏರಿಕೆ ಮತ್ತು ಪೂರೈಕೆ ಕಡಿತ

ಈ ನಡುವೆ, ಎಲ್‌ಪಿಜಿ ಗ್ಯಾಸ್ ದರವೂ ಏರಿಕೆಯಾಗಿದ್ದು, ಹಿಂದೆ ಲೀಟರ್‌ಗೆ 63 ರೂಪಾಯಿ ಇದ್ದ ದರ ಈಗ 75 ರೂಪಾಯಿಗೆ ತಲುಪಿದೆ. ಒಂದೇ ಬಾರಿಗೆ 12 ರೂಪಾಯಿ ಹೆಚ್ಚಳವಾಗಿದೆ. ಪೂರೈಕೆ ಕಡಿಮೆಯಾಗಿರುವುದರಿಂದ ಬಳ್ಳಾರಿಗೆ ಬರಬೇಕಿದ್ದ ಗ್ಯಾಸ್ ಪ್ರಮಾಣ ಅರ್ಧಕ್ಕರ್ಧ ಕಡಿತಗೊಂಡಿದೆ ಎಂದು ತಿಳಿದುಬಂದಿದೆ.

ಆಟೋ ಸೇವೆ ಸ್ಥಗಿತದ ಭೀತಿ

ಹೊಸ ಸ್ಟಾಕ್ ಯಾವಾಗ ಲಭ್ಯವಾಗುತ್ತದೆ ಎಂಬ ಸ್ಪಷ್ಟ ಮಾಹಿತಿ ಡೀಲರ್‌ಗಳಿಗೂ ಇಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಬಳ್ಳಾರಿಯಲ್ಲಿ ಆಟೋ ಸೇವೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

Edited By : Shivu K
PublicNext

PublicNext

15/03/2026 01:28 pm

Cinque Terre

15.64 K

Cinque Terre

0