ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ: ಉಪ್ಪಾರ ಹೊಸಳ್ಳಿ ನೀಲಮ್ಮನವರಿಗೆ ವಾತ್ಸಲ್ಯ ಮನೆ ಹಸ್ತಾಂತರ

ಬಳ್ಳಾರಿ: ಸಿರುಗುಪ್ಪದ ತೆಕ್ಕಲಕೋಟೆ ಉಪ್ಪಾರ ಹೊಸಳ್ಳಿಯ ನೀಲಮ್ಮ ಎಂಬವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಎಂ. ಎಸ್. ಸೋಮಲಿಂಗಪ್ಪ, ಗ್ರಾಪಂ ಅಧ್ಯಕ್ಷೆ ಸುವರ್ಣಮ್ಮ, ಊರಿನ ಗಣ್ಯರಾದ ವೆಂಕಟೇಶ್, ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಮಾಜದಲ್ಲಿನ ಕಡು ಬಡವರು, ನಿರ್ಗತಿಕರನ್ನು ಗುರುತಿಸಿ ಅವರಿಗೆ ಮೂಲಭೂತ ಸೌಕರ್ಯದ ಜೊತೆಗೆ ಸೂರು ಇಲ್ಲದವರಿಗೆ ಸೂರು ನಿರ್ಮಿಸಿಕೊಟ್ಟ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ದಂಪತಿ ಕಾರ್ಯ ಶ್ಲಾಘನೀಯ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಉಪ್ಪಾರ ಹೊಸಳ್ಳಿ ಗ್ರಾಮದ ನಿವಾಸಿ ಹೋಟೆಲ್ ನೀಲಮ್ಮನವರಿಗೆ 88 ವರ್ಷ ವಯಸ್ಸಾಗಿದ್ದು, ಅವರಿಗೆ ಗಂಡು ಮಕ್ಕಳು ಯಾರು ಇಲ್ಲ. ಆದ್ದರಿಂದ ಜೀವನದ ನಿರ್ವಹಣೆಗೆ ಸಂಸ್ಥೆಯ ಮಾಸಿಕ ಆಸರೆ ನೆರವಾಗಿದೆ ಜೊತೆಗೆ ಅವರಿಗೆ ವಾಸಿಸಲು ವಾತ್ಸಲ್ಯ ಮನೆ ನೀಡಿರುವುದು ಮೆಚ್ಚುವಂಥದ್ದು ಎಂದು ಗಣ್ಯರು ಹೇಳಿದರು.

Edited By : Nirmala Aralikatti
Kshetra Samachara

Kshetra Samachara

16/03/2026 08:01 pm

Cinque Terre

660

Cinque Terre

0