ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲ್ಲರನ್ನೂ ಕ್ಷಮಿಸಿ, ಎಲ್ಲರಿಗೂ ಕ್ಷಮೆ ಕೇಳಿ ಹೊರಟುಬಿಡು - ದಯಾಮರಣ ಪಡೆದ ಹರೀಶ್ ರಾಣಾ ಕೊನೆ ಕ್ಷಣದ ವಿಡಿಯೋ

ಗಾಜಿಯಾಬಾದ್: ಕಟ್ಟಡದ ಮಹಡಿಯಿಂದ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಸಂಪೂರ್ಣ ಅಂಗವೈಕಲ್ಯದಿಂದ ಬಳಲುತ್ತ ಕೋಮಾಗೆ ಜಾರಿದ್ದ ಹರೀಶ್ ರಾಣಾ ಅವರಿಗೆ ಸುಪ್ರೀಂ ಕೋರ್ಟ್ ದಯಾಮರಣ ಕರುಣಿಸಿದೆ. 12 ವರ್ಷಗಳಿಂದ ಕೋಮಾದಲ್ಲೇ ಇದ್ದ ಹರೀಶ್ ರಾಣಾ ಅವರಿಗೆ ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದಯಾಮರಣ ನೀಡಲಾಗಿದೆ.

ಈ ವೇಳೆ ಅಲ್ಲಿಗೆ ಬಂದಿದ್ದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹೋದರಿಯರು 'ಎಲ್ಲರನ್ನೂ ಕ್ಷಮಿಸು, ಎಲ್ಲರಿಗೂ ಕ್ಷಮೆ ಕೇಳಿ ಹೊರಟುಬಿಡು' ಎಂದು ಹೇಳುತ್ತಿರುವ ವಿಡಿಯೋ ಎಂಥವರನ್ನು ಕರಳು ಹಿಂಡುವಂತೆ ಮಾಡುತ್ತದೆ.

ಮೂಲತಃ ದೆಹಲಿಯವರಾದ ಹರೀಶ್ ರಾಣಾ ಆಗ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು. 2013ರ ಆಗಸ್ಟ್ 20ರಂದು ರಕ್ಷಾ ಬಂಧನ ಹಬ್ಬದಂದು ಹಾಸ್ಟೆಲ್ ಕಟ್ಟಡದಿಂದ ಆಕಸ್ಮಿಕವಾಗಿ ಬಿದ್ದು ಶೇಕಡಾ ನೂರಕ್ಕೆ ನೂರರಷ್ಟು ಅಂಗವೈಕಲ್ಯಗೊಂಡು ಕೋಮಾಗೆ ಜಾರಿದ್ದರು. ಅಲ್ಲಿಂದ ಸುಮಾರು 12 ವರ್ಷಗಳವರೆಗೆ ಕೋಮಾದಲ್ಲಿದ್ದ ಅವರಿಗೆ ದಯಾಮರಣ ನೀಡಬೇಕು ಎಂದು ಪೋಷಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಹಲವಾರು ವೈದ್ಯಕೀಯ ಮಂಡಳಿಗಳ ವರದಿಗಳು ಮತ್ತು ಕುಟುಂಬದ ಒಪ್ಪಿಗೆಯನ್ನು ಪರಿಗಣಿಸಿದ ನಂತರ ಸುಪ್ರೀಂ ಕೋರ್ಟ್ ಹರೀಶ್ ರಾಣಾ ಅವರ ಪ್ರಕರಣದಲ್ಲಿ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ನೀಡಿತು.

ಸುಪ್ರೀಂ ಕೋರ್ಟ್ ಆದೇಶದಂತೆ ಇಂದು ಏಮ್ಸ್ ಆಸ್ಪತ್ರೆಯಲ್ಲಿ ಹರೀಶ್ ರಾಣಾ ಅವರ ಜೀವರಕ್ಷಕ ಸೌಲಭ್ಯಗಳನ್ನು ಕ್ರಮೇಣ ತೆಗೆದುಹಾಕಿ ದಯಾಮರಣ ನೀಡಲಾಗಿದೆ.

Edited By :
PublicNext

PublicNext

15/03/2026 09:35 pm

Cinque Terre

57.34 K

Cinque Terre

8

ಸಂಬಂಧಿತ ಸುದ್ದಿ