ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಸುಗೂಸಿನ ಮೇಲೆ ರಾಕ್ಷಸನ ಕ್ರೂರ ಹಲ್ಲೆ: ಕರುಳು ಕಿತ್ತುಬರುವ ದೃಶ್ಯ ವೈರಲ್!

ಇವನೇನು ಮನುಷ್ಯನಾ? ರಾಕ್ಷಸನ? ಮಗುವಿನ ಮೇಲೆ ಈ ರೀತಿ ಕ್ರೌರ್ಯ ಮೆರೆದಿದ್ದಾನಲ್ಲ. ಛೇ…ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ನಾಗರಿಕ ಸಮಾಜವೇ ತಲೆತಗ್ಗಿಸುವಂತಿದೆ.

ಹಸುಗೂಸಿನ ಮೇಲೆ ವ್ಯಕ್ತಿಯೊಬ್ಬ ದಿಂಬಿನಿಂದ ಅತ್ಯಂತ ಕ್ರೂರವಾಗಿ ಹೊಡೆಯುತ್ತಿರುವ ದೃಶ್ಯಗಳು ಎಲ್ಲರ ಆಕ್ರೋಶಕ್ಕೆ ಕಾರಣವಾಗಿವೆ. ಸೋಫಾ ಮೇಲೆ ಮಲಗಿರುವ ಚಿಕ್ಕ ಮಗುವಿನ ಮೇಲೆ ಈ ವ್ಯಕ್ತಿ ದಿಂಬಿನಿಂದ ಬಲವಾಗಿ ಹೊಡೆಯುತ್ತಿದ್ದಾನೆ. ಮಗು ಕಿರುಚುತ್ತಿದ್ದರೂ, ಕೈಕಾಲು ಬಡಿಯುತ್ತಿದ್ದರೂ ಕಿಂಚಿತ್ತೂ ದಯೆ ತೋರದ ಆ ವ್ಯಕ್ತಿ ಸತತವಾಗಿ ಈ ಹಿಂಸೆಯನ್ನು ಮುಂದುವರಿಸಿದ್ದಾನೆ.

ಈ ವ್ಯಕ್ತಿಗೆ ಸಾರ್ವಜನಿಕವಾಗಿ ಕಠಿಣ ಶಿಕ್ಷೆಯಾಗಬೇಕು ಎಂಬ ಅಭಿಯಾನವೇ ಈಗ ಇಂಟರ್ನೆಟ್‌ನಲ್ಲಿ ಶುರುವಾಗಿದೆ. ಅನೇಕರು ಸಂಬಂಧಪಟ್ಟ ಪೊಲೀಸ್ ಇಲಾಖೆಗಳನ್ನು ಟ್ಯಾಗ್ ಮಾಡಿ, ಈ ಕೂಡಲೇ ಈತನನ್ನು ಬಂಧಿಸಿ ಜೈಲಿಗಟ್ಟಬೇಕೆಂದು ಆಗ್ರಹಿಸಿದ್ದಾರೆ.

Edited By :
PublicNext

PublicNext

20/03/2026 05:11 pm

Cinque Terre

35.35 K

Cinque Terre

3

ಸಂಬಂಧಿತ ಸುದ್ದಿ