ಸೌದಿ ಅರೇಬಿಯಾದ ಪವಿತ್ರ ಮದೀನಾ ನಗರದ ಪ್ರವಾದಿ ಮಸೀದಿಯಲ್ಲಿ (Prophet's Mosque) ಇತ್ತೀಚೆಗೆ ನಡೆದ ಘಟನೆಯೊಂದು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ತನ್ನ ಅನಾರೋಗ್ಯ ಪೀಡಿತ ತಂದೆಯನ್ನು ಪ್ರೀತಿಯಿಂದ ನೋಡಿಕೊಳ್ಳಬೇಕಾದ ಮಗನೇ, ಅವರನ್ನು ಸಾಯಿಸಲು ಯತ್ನಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮದೀನಾದ ಪವಿತ್ರ ಮಸೀದಿಯ ಒಳಗಡೆ ಯಾತ್ರಾರ್ಥಿಯೊಬ್ಬ ತನ್ನ ವೃದ್ಧ ತಂದೆಯ ಕುತ್ತಿಗೆ ಹಿಸುಕಿ ಕೊಲ್ಲಲು ಪ್ರಯತ್ನಿಸಿದ್ದಾನೆ. ತನ್ನ ಶಕ್ತಿಯನ್ನೆಲ್ಲಾ ಬಳಸಿ ತಂದೆಯ ಉಸಿರು ಗಟ್ಟಿಸಲು ಆತ ಮುಂದಾದಾಗ ಸ್ಥಳದಲ್ಲಿದ್ದವರು ಹೌಹಾರಿದ್ದಾರೆ.
ತನ್ನ ಅನಾರೋಗ್ಯಪೀಡಿತ ತಂದೆ ಈ ಪವಿತ್ರ ಭೂಮಿಯಲ್ಲಿ ಪ್ರಾಣ ಬಿಟ್ಟರೆ ಅವರಿಗೆ ನೇರವಾಗಿ 'ಸ್ವರ್ಗ' ಸಿಗುತ್ತದೆ ಎಂಬುದು ಆತನ ನಂಬಿಕೆಯಾಗಿತ್ತು. ತಂದೆಯ ಮೇಲಿನ 'ಅತಿರೇಕದ ಪ್ರೀತಿ' ಮತ್ತು 'ಧಾರ್ಮಿಕ ಮೂಢನಂಬಿಕೆಯಿಂದ' ಆತ ಈ ಕೃತ್ಯಕ್ಕೆ ಕೈ ಹಾಕಿದ್ದಾಗಿ ತಿಳಿದುಬಂದಿದೆ.
ಯಾವುದೇ ಧರ್ಮವು ಹಿಂಸೆಯನ್ನು ಅಥವಾ ಕೊಲೆಯನ್ನು ಬೆಂಬಲಿಸುವುದಿಲ್ಲ. ಮೋಕ್ಷ ಸಿಗುತ್ತದೆ ಎಂಬ ಕಾರಣಕ್ಕೆ ಜೀವ ತೆಗೆಯಲು ಮುಂದಾಗುವುದು ಅಕ್ಷಮ್ಯ ಅಪರಾಧ. ಪ್ರಸ್ತುತ ಸೌದಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು ತನಿಖೆ ಮುಂದುವರೆಸಿದ್ದಾರೆಂದು ತಿಳಿದುಬಂದಿದೆ.
PublicNext
20/03/2026 06:12 pm
LOADING...