ಚಿಕ್ಕಮಗಳೂರು: ಅಡುಗೆ ಅನಿಲದ ಅಭಾವವನ್ನು ಖಂಡಿಸಿ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿಯು ಕೇಂದ್ರ ಸರ್ಕಾರದ ವಿಭಿನ್ನವಾಗಿ ಪ್ರತಿಭಟಿಸಿತು.
ಆಜಾದ್ ಪಾರ್ಕ್ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಗ್ಯಾಸ್ ಸಿಲಿಂಡರ್‌ಗಳ ಕೊರತೆ ಮತ್ತು ಏರುತ್ತಿರುವ ಬೆಲೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಪ್ರಮುಖವಾಗಿ ರಸ್ತೆಯ ಮಧ್ಯದಲ್ಲೇ ಮಣ್ಣಿನ ಒಲೆ ಹಾಕಿ , ಕಟ್ಟಿಗೆ ಬಳಸಿ ಟೀ ತಯಾರಿಸುವ ಮೂಲಕ ಕೇಂದ್ರ ಸರ್ಕಾರದ ಧೋರಣೆಯನ್ನು ವ್ಯಂಗ್ಯವಾಡಿದ ಪ್ರತಿಭಟನಾಕಾರರು, ಸಿಲಿಂಡರ್ ಪೂರೈಕೆಯಲ್ಲಿನ ವೈಫಲ್ಯದಿಂದಾಗಿ ಜನಸಾಮಾನ್ಯರು ಮತ್ತೆ ಹಳೆಯ ಕಾಲದಂತೆ ಹೊಗೆಯ ಒಲೆಗೆ ಶರಣಾಗುವ ಅನಿವಾರ್ಯತೆ ಎದುರಾಗಿದೆ ಎಂದು ದೂರಿದರು. ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಮುಖಂಡರು, ಸಾಮಾನ್ಯ ವರ್ಗದ ಜನರ ದೈನಂದಿನ ಜೀವನಕ್ಕೆ ಅಗತ್ಯವಿರುವ ಅನಿಲ ಪೂರೈಕೆಯನ್ನು ಸರಿಪಡಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
PublicNext
16/03/2026 06:30 pm
LOADING...